



ಬ್ರಹ್ಮಾವರ: ನಮ್ಮಲ್ಲಿ ಗೋವುಗಳ ದಿನನಿತ್ಯ ವಧಿಸುವ ಮೂಲಕ ಮಾರಣ ಹೋಮಗಳನ್ನು ಮಾಡುತ್ತಿದ್ದಾರೆ. ಗೋವನ್ನು ವಧೆ ಮಾಡುವವರು ಪಾಪಿಗಳು ಗೋವುಗಳಿಂದ ತಯಾರಾಗುವ ಪಂಚಗವ್ಯ ವಸ್ತುಗಳಲ್ಲಿ ಔಷಧಿಯ ಶಕ್ತಿಗಳಿರುತ್ತದೆ. ಈ ಪಂಚಗವ್ಯದಿಂದ ಕುಷ್ಟರೋಗಗಳು ಗುಣಮುಖವಾಗಿರುವ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ. ಇದಲ್ಲದೇ ಅದೆಷ್ಟೂ ಖಾಯಿಲೆಗಳಿಂದ ನಿವೃತ್ತಿ ಪಡೆದ ಉದಾಹರಣೆಗಳಿವೆ ಎಂದು ಶ್ರೀ ಬಾಳೆಕುದ್ರು ಮಠಾಧೀಶರಾದ ಶ್ರೀ ನೃಸಂಹಾಶ್ರಮ ಸ್ವಾಮೀಜಿ ಹೇಳಿದರು. ವಿಶ್ವ ಹಿಂದೂ ಪರಿಷತ್ ಬಜರಂಗದಳ ಕುಂದಾಪುರ ಪ್ರಖಂಡ ಕೋಟೇಶ್ವರ ವಲಯ ನೇತೃತ್ವದಲ್ಲಿ ಭಾನುವಾರ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಜರುಗಿದ 11ನೇ ವರ್ಷದ ಸಾಮೂಹಿಕ ಗೋ ಪೂಜೆ ನೆರವೇರಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು. ಕೋಟೇಶ್ವರದ ವೈದ್ಯ ಪ್ರಸಾದ್ ಎನ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ಕೋಟಿಲಿಂಗೇಶ್ವರ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಸದಸ್ಯ ಸುರೇಶ್ ಶೇರಿಗಾರ್ ಶೋಭಾಯಾತ್ರೆಯನ್ನು ಉದ್ಘಾಟಿಸಿದರು. ಕರ್ನಾಟಕ ಬಜರಂಗದಳ ಸಹ ಸಂಚಾಲಕ ರಘು ಜಿ ಸಕಲೇಶಪುರ ದಿಕ್ಸೂಚಿ ಭಾಷಣ ಮಾಡಿದರು. ಬಜರಂಗದಳ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ, ಜಿಲ್ಲಾ ವಿಶೇಷ ಸಂಪರ್ಕ ಪ್ರಮುಖ್ ಗಿರೀಶ್ ಕುಂದಾಪುರ, ಜಿಲ್ಲಾ ಗೋರಕ್ಷ ಪ್ರಮುಖ ನಾಗರಾಜ್, ಕುಂದಾಪುರ ಪ್ರಖಂಡ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ವಿಜಯ ಶೆಟ್ಟಿ ಗೋಳಿಯಂಗಡಿ, ಬಜರಂಗದಳ ತಾಲೂಕು ಸಹಸಂಚಾಲಕ ವಸಂತ್ ಸಂಗಮ್, ಕೋಟೇಶ್ವರ ವಲಯ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಹರ್ಷವರ್ಧನ ಜೆ.ಕೆ, ಕೋಟೇಶ್ವರ ವಲಯ ಬಜರಂಗದಳ ಸಂಚಾಲಕ ಸತೀಶ್ ಅರಸರಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. ಈ ವೇಳೆ ಕೋಟೇಶ್ವರ ಕೋಟಿಲಿಂಗೇಶ್ವರ ದೇವಳದಿಂದ ಸರಸ್ವತಿ ಕಲ್ಯಾಣ ಮಂಟಪದ ತನಕ ಕೋಟೇಶ್ವರದ ಪ್ರಮುಖ ಬೀದಿಗಳಲ್ಲಿ ಪುರಮೆರವಣಿಗೆಯ ಮೂಲಕ ಶೋಭಾಯಾತ್ರೆ ನಡೆಯಿತು. ಕುಣಿತ ಭಜನೆ, ನಾಮಸಂರ್ಕೀತನೆ, ಗೋವಿನ ಕುರಿತ ಘೋಷಣೆಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು. ದೇಶಿಯ ಗೋ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ವಿಘ್ನೇಶ್ ದೊಡ್ಡೋಣಿ ವ್ಯಯಕ್ತಿಕ ಗೀತೆ ಹಾಡಿದರು. ಬಜರಂಗದಳ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವಿಘ್ನೇಶ್ ಮಾರ್ಕೋಡು ಕಾರ್ಯಕ್ರಮ ನಿರೂಪಿಸಿದರು. ಶ್ರೀಕಾಂತ್ ಆಚಾರ್ ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.