logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಮತದಾನದ ವೇಳೆ ರಾಜ್ಯದ ವಿವಿಧೆಡೆ 12 ಪ್ರಕರಣ ದಾಖಲು: 384.46 ಕೋಟಿ ರೂ. ಮೌಲ್ಯದ ವಸ್ತುಗಳು ವಶ

ಟ್ರೆಂಡಿಂಗ್
share whatsappshare facebookshare telegram
11 May 2023
post image

ಬೆಂಗಳೂರು: ಪ್ರಜಾಪ್ರಭುತ್ವದ ಹಬ್ಬ ರಾಜ್ಯ ವಿಧಾನಸಭಾ ಚುನಾವಣೆ ಮೇ 10ರಂದು ಯಶಸ್ವಿಯಾಗಿ ಮತದಾನ ಮುಗಿದಿದೆ. ಆದ್ರೆ ಶಾಂತಿಯುತವಾಗಿ ನಡೆಯಬೇಕಿದ್ದ ಮತದಾನದ ವೇಳೆ ರಾಜ್ಯದ ಕೆಲ ಕಡೆ ಗಲಾಟೆಗಳು, ಮರಾಮಾರಿಗಳು ಕೂಡ ನಡೆದಿವೆ. ಮತದಾನದ ವೇಳೆ ರಾಜ್ಯದ ವಿವಿಧೆಡೆ ನಡೆದ ಗಲಾಟೆ ಸಂಬಂಧ ಒಟ್ಟು 12 ಪ್ರಕರಣಗಳು ದಾಖಲಾಗಿವೆ.

12 ಪ್ರಕರಣಗಳ ಪೈಕಿ ಪ್ರಮುಖವೆಂದರೆ ವಿಜಯಪುರ ಜಿಲ್ಲೆಯಲ್ಲಿ ಬಸವನ ಬಾಗೇವಾಡಿ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಜಗಳ. ಇಲ್ಲಿ ಮತದಾನದ ವೇಳೆ ವಿವಿ ಪ್ಯಾಟ್​​​ಗಳನ್ನು ಒಡೆದು ಹಾಕಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಕಾರು ಜಖಂಗೊಳಿಸಲಾಗಿತ್ತು. ಘಟನೆ ಸಂಬಂಧ ಒಟ್ಟು 34 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್, 143,147,323,324,307,332,353 ,r/w 149 IPc ,136 Rp act, KPDLP 1981 Act ಅಡಿಯಲ್ಲಿ ಕೇಸ್ ದಾಖಲಾಗಿದ್ದು ಪ್ರಕರಣ ಸಂಬಂಧ ಒಟ್ಟು 23 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಮೈಸೂರು ಜಿಲ್ಲೆ ಚಾಮುಂಡೇಶ್ವರಿ ಕ್ಷೇತ್ರದಲ್ಲೂ 1 ಕೇಸ್ ದಾಖಲಾಗಿದೆ. ನಿನ್ನೆ ಮತಚಲಾಯಿಸಲು ಆಗಮಿಸಿದ್ದ ಶಿವಮೂರ್ತಿ ಎಂಬಾತ ಮತ ಹಾಕುವ ವೇಳೆ ಮತಗಟ್ಟೆಯಲ್ಲಿ ಕಂಟ್ರೋಲ್ ಯೂನಿಟ್​ ಒಡೆದು ಹಾಕಿದ್ದ ಘಟನೆ ಸಂಬಂಧ ಶಿವಮೂರ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮತ್ತೊಂದೆಡೆ ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭೆ ಕ್ಷೇತ್ರದ ಎಂಎಂ ಹಿಲ್ಸ್ ಬಳಿಯ ತೋಕರ ಗ್ರಾಮಕ್ಕೆ ಮತ ಹಾಕಿ ಹೋಗುವಾಗ ಆನೆ ಕಾಲ್ತುಳಿತಕ್ಕೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. 44 ವರ್ಷದ ಪುಟ್ಟ ಸ್ವಾಮಿ ಮೃತರು. ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆ ಮತ ಚಲಾಯಿಸಿ ಮನೆಗೆ ವಾಪಸ್ ಹೋಗುತ್ತಿದ್ದಾಗ ರಾಮಾಪುರದ ಮಾಟರಹಳ್ಳಿ ಗ್ರಾಮದ ಬಳಿ ಆನೆ ದಾಳಿ ಮಾಡಿದೆ. ಮೃತದೇಹವನ್ನು ಹನೂರು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಹೀಗೆ ಮತದಾನದ ವೇಳೆ ನಡೆದ ಒಟ್ಟು 12 ಪ್ರಕರಣಗಳು ದಾಖಲಾಗಿದ್ದು ಈ ಮೂರು ಪ್ರಮುಖ ಘಟನೆಗಳಾಗಿವೆ.

ಚುನಾವಣೆ ಮುಗಿಯುವ ಹೊತ್ತಿಗೆ ಒಟ್ಟು 384.46 ಕೋಟಿ ವಶ ಚುನಾವಣೆ ಸಮಯದಲ್ಲಿ ಅಧಿಕಾರಿಗಳು ಒಟ್ಟು 384.46 ಕೋಟಿ ಮೌಲ್ಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಹಣ, ಮದ್ಯ, ಉಡುಗೊರೆ ಸೇರಿ ಒಟ್ಟು 384.46 ಕೋಟಿಗೆ ಏರಿಕೆಯಾಗಿದೆ.

ನಗದು : 153.17 ಕೋಟಿ ಉಡುಗೊರೆ : 24.26 ಕೋಟಿ ಮೌಲ್ಯದ್ದು ಮದ್ಯ : 84.93 ಕೋಟಿ ಮೌಲ್ಯದ 22,62,855 ಲೀಟರ್ ವಶಕ್ಕೆ ಡ್ರಗ್ಸ್ : 24.3 ಕೋಟಿ ಮೌಲ್ಯದ 1,995.ಕೆಜಿ ವಶಕ್ಕೆ ಚಿನ್ನ : 93.28 ಕೋಟಿ ಮೌಲ್ಯದ 182.28 KG ವಶಕ್ಕೆ ಬೆಳ್ಳಿ : 4.79 ಕೋಟಿ ಮೌಲ್ಯದ 691.94 ಕೆಜಿ ವಶಕ್ಕೆ

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.