logo
WhatsApp Image 2026-04-02 at 14.46.04.jpeg
hindalco everlast.jpeg

ಜ್ಞಾನಸುಧಾದ 12 ವಿದ್ಯಾರ್ಥಿಗಳು ಐಐಟಿ ಪ್ರವೇಶಕ್ಕೆ ಅರ್ಹತೆ.

ಟ್ರೆಂಡಿಂಗ್
share whatsappshare facebookshare telegram
10 Jun 2024
post image

ಕಾರ್ಕಳ: ರಾಷ್ಟ್ರ ಮಟ್ಟದಲ್ಲಿ ಐ.ಐ.ಟಿ ಪ್ರವೇಶಕ್ಕೆ ಎನ್.ಟಿ.ಎ ನಡೆಸುವ ಜೆಇಇ ಅಡ್ವಾನ್ಸ್‍ಡ್ ಪರೀಕ್ಷೆಯು ಮೇ ತಿಂಗಳ 26ರಂದು ನಡೆದಿದ್ದು, ಪರೀಕ್ಷೆ ಬರೆದ 1,80,200 ವಿದ್ಯಾರ್ಥಿಗಳಲ್ಲಿ 48,248 ವಿದ್ಯಾರ್ಥಿಗಳು ಅರ್ಹತೆ ಗಿಟ್ಟಿಸಿಕೊಂಡಿದ್ದು, ಜ್ಞಾನಸುಧಾದ 12 ವಿದ್ಯಾರ್ಥಿಗಳು ಐ.ಐ.ಟಿ ಪ್ರವೇಶಕ್ಕೆ ಅರ್ಹತೆ ಪಡೆದಿರುತ್ತಾರೆ.

ರಾಷ್ಟಮಟ್ಟದ ಜನರಲ್ ಕೆಟಗರಿಯಲ್ಲಿ ವಿದ್ಯಾರ್ಥಿಗಳಾದ ಬಿಪಿನ್ ಜೈನ್ 5161ನೇ ರ್ಯಾಂಕ್, ಚಿರಂತನ ಜೆ.ಎ. 5374ನೇ ರ್ಯಾಂಕ್, ಪ್ರಿಯಾಂಶ್ ಎಸ್.ಯು. 6128ನೇ ರ್ಯಾಂಕ್, ಸಮ್ಮಿತ್ ಕೃಷ್ಣ ಯು 12564ನೇ ರ್ಯಾಂಕ್, ಕನ್ನಿಕಾ ದೀಪಕ್ ಶೆಟ್ಟಿ 13994ನೇ ರ್ಯಾಂಕ್, ಪ್ರಥಮ್ ಕುಮಾರ್ ಶೆಟ್ಟಿ 16213ನೇ ರ್ಯಾಂಕ್, ರಿಷಿತ್‍ವೇಣು ಬಿಳಿಮಗ್ಗ 16471ನೇ ರ್ಯಾಂಕ್, ಕ್ಷಿರಾಜ್ ಎಸ್.ಆಚಾರ್ಯ 18924ನೇ ರ್ಯಾಂಕ್, ನಿಮೇಶ್ ಆರ್ ಆಚಾರ್ಯ 19153ನೇ ರ್ಯಾಂಕ್, ಅದಿತ್ ಎನ್ ಪೂಜಾರಿ 19965ನೇ ರ್ಯಾಂಕ್, ಪ್ರಣವ್ ಕುಮಾರ್ ಭಂಡಿ 22987ನೇ ರ್ಯಾಂಕ್ ಮತ್ತು ಶ್ರೀದಾ ಕಾಮತ್ 24588ನೇ ರ್ಯಾಂಕ್ ಪಡೆದ ಸಾಧಕ ವಿದ್ಯಾರ್ಥಿಗಳಾಗಿದ್ದಾರೆ.

ಸಂಸ್ಥೆಯ 3 ವಿದ್ಯಾರ್ಥಿಗಳು 7 ಸಾವಿರದೊಳಗಿನ ರ್ಯಾಂಕ್, 10 ವಿದ್ಯಾರ್ಥಿಗಳು 20 ಸಾವಿರದೊಳಗಿನ ರ್ಯಾಂಕ್ ಗಳಿಸಿದ್ದು, ಈ ಎಲ್ಲಾ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭಹಾರೈಸಿದ್ದಾರೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.