logo
WhatsApp Image 2026-04-02 at 14.46.04.jpeg
hindalco everlast.jpeg

ಅತೀಕ್- ಅಶ್ರಫ್ ಹಂತಕರಿಗೆ 14 ದಿನಗಳ ನ್ಯಾಯಾಂಗ ಬಂಧನ

ಟ್ರೆಂಡಿಂಗ್
share whatsappshare facebookshare telegram
17 Apr 2023
post image

ಲಕ್ನೋ: ಪಾತಕಿ, ಮಾಜಿ ಸಂಸದ ಅತೀಕ್‌ ಅಹ್ಮದ್‌ ಹಾಗೂ ಆತನ ಸಹೋದರನನ್ನು ಪೊಲೀಸರ ಎದುರೇ ಗುಂಡಿಟ್ಟು ಹತ್ಯೆಗೈದವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಹತ್ಯೆ ಮಾಡಿದ ಆರೋಪಿಗಳಾದ ಲವ್ಲೇಶ್‌ ತೆವಾರಿ, ಸನ್ನಿ ಸಿಂಗ್‌, ಅರುಣ್‌ ಮೌರ್ಯ ಮೂವರನ್ನು ಪೊಲೀಸರು ಕೋರ್ಟ್‌ ಮುಂದೆ ಹಾಜರು ಪಡಿಸಿದ್ದರು. ಅವರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಅಹ್ಮದ್ ಗ್ಯಾಂಗ್ ನಿರ್ಮೂಲನೆ ಮಾಡುವ ಮೂಲಕ ತಾವು ಹೆಸರು ಗಳಿಸಲು ಬಯಸಿದ್ದೇವೆ ಎಂದು ಮೂವರು ದುಷ್ಕರ್ಮಿಗಳು ಹೇಳಿಕೊಂಡಿದ್ದಾರೆ. ಅವರು ಕೊಲೆಯನ್ನು ಎಚ್ಚರಿಕೆಯಿಂದ ಯೋಜಿಸಿ ಮಾಡಿದ್ದಾರೆ. ಶನಿವಾರ ಇಡೀ ದಿನ ಪೊಲೀಸರ ವಶದಲ್ಲಿದ್ದ ಅಹ್ಮದ್‌ನನ್ನು ಹಿಂಬಾಲಿಸಿದ್ದರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯಲ್ಲಿ ಭಾನುವಾರ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ಅಲ್ಲದೇ ರಾಜ್ಯದಾದ್ಯಂತ ಬೃಹತ್‌ ಸಭೆ ಆಯೋಜನೆಯನ್ನು ನಿಷೇಧಿಸಲಾಗಿತ್ತು.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.