



ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಿಮಾನ ಇಂಧನ (ATF) ದರವನ್ನು ಸೆ.01ರಂದು ಶೇ. 14ರಷ್ಟು ಹೆಚ್ಚಿಸಿವೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗಿರುವ ಬದಲಾವಣೆಗೆ ಅನುಗುಣವಾಗಿ ದರ ಹೆಚ್ಚಳ ಮಾಡಲಾಗಿದೆ ಎಂದು ಕಂಪನಿಗಳು ತಿಳಿಸಿವೆ.
ದೆಹಲಿಯಲ್ಲಿ ವಿಮಾನ ಇಂಧನ ದರವು ಪ್ರತಿ ಕಿಲೋ ಲೀಟರಿಗೆ 13,911 ರೂ. ನಷ್ಟು ಹೆಚ್ಚಾಗಿದ್ದು, 1.2 ಲಕ್ಷ ರೂ.ಗೆ ತಲುಪಿದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್’ಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ವ್ಯತ್ಯಾಸ ಆಗುತ್ತದೆ.
ಈ ಹಿಂದೆ ಜುಲೈ 1ರಂದು ಕಿಲೋ ಲೀಟರಿಗೆ 1,477 ರೂ. ಮತ್ತು ಆಗಸ್ಟ್ 1ರಂದು ಕಿಲೋ ಲೀಟರಿಗೆ 7,728 ರೂ.ನಷ್ಟು ದರ ಹೆಚ್ಚಿಸಲಾಗಿತ್ತು. ಸೆ. 01ರ ದರ ಹೆಚ್ಚಳವನ್ನು ಒಳಗೊಂಡು ಕಿಲೋ ಲೀಟರಿಗೆ ಒಟ್ಟು 23,116 ರೂ. ನಷ್ಟು ಏರಿಕೆ ಆಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.