



ಮಂಗಳೂರು: ಮಂಗಳೂರು ಹೊರ ವಲಯದಲ್ಲಿ ಭೀಕರ ದುರಂತ ಸಂಭವಿಸಿದೆ. ಗೂಡ್ಸ್ ರೈಲಿನಡಿ ಸಿಲುಕಿ 17 ಎಮ್ಮೆಗಳು ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ.
ಭಾನುವಾರ (ಮೇ 14) ತಡರಾತ್ರಿ ಸುಮಾರು 12 ಗಂಟೆಯಲ್ಲಿ ಮಂಗಳೂರು ಹೊರವಲಯದ ಜೋಕಟ್ಟೆ ಅಂಗರಗುಂಡಿ ಬಳಿ ರೈಲಿನಡಿ ಸಿಲುಕಿ 17 ಎಮ್ಮೆಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.
ಕಂಕನಾಡಿ ಕಡೆಯಿಂದ ಎಂಸಿಎಫ್ ಕಡೆಗೆ ರಾತ್ರಿ ಹೋಗುತ್ತಿದ್ದ ಗೂಡ್ಸ್ ರೈಲಿನಡಿ ಎಮ್ಮೆಗಳು ಸಿಲುಕಿದ ಪರಿಣಾಮ ಈ ದುರಂತ ಸಂಭವಿಸಿದೆ.
ಸಾಮಾನ್ಯವಾಗಿ ಈ ಭಾಗದಲ್ಲಿ ರೈಲ್ವೆ ಟ್ರ್ಯಾಕ್ ಬಳಿ ನೀರು ನಿಲ್ಲುತ್ತದೆ. ಮಳೆ ಬಂದ ಕಾರಣ ಹಾಗೂ ಅಲ್ಲಿ ಬೇರೆ ಬೇರೆ ಕಾರಣಗಳಿಂದ ನೀರು ಸಂಗ್ರಹವಾಗುವ ಹಿನ್ನೆಲೆಯಲ್ಲಿ ಎಮ್ಮೆಗಳು ಗುಂಪುಗೂಡಿ ರೈಲ್ವೆ ಮಾರ್ಗದ ಬಳಿ ನಿಲ್ಲುತ್ತವೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಂಗಳೂರಿನ ಕದ್ರಿ ಅಗ್ನಿಶಾಮಕದಳದ ಸಿಬ್ಬಂದಿ ತಡರಾತ್ರಿ ಕಾರ್ಯಾಚರಣೆ ನಡೆಸಿ ಹಳಿ ಬಳಿಯ ಎಮ್ಮೆಗಳ ಮೃತದೇಹಗಳನ್ನು ತೆರವು ಮಾಡಿದ್ದಾರೆ. ಈ ಸಂದರ್ಭ ನಾಲ್ಕು ಎಮ್ಮೆಗಳನ್ನು ರಕ್ಷಿಸಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.