



ಇಸ್ಲಾಮಾಬಾದ್: ಪಾಕಿಸ್ತಾನದ ಜಲಗಡಿಯೊಳಗೆ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದ್ದ 199 ಮಂದಿ ಭಾರತೀಯರನ್ನು ಇದೇ ಶುಕ್ರವಾರ (ಮೇ 12) ದಂದು ಪಾಕ್ ಅಧಿಕಾರಿಗಳು ಬಿಡುಗಡೆ ಮಾಡಲಿದ್ದಾರೆ.
ಮೇ 12 ರಂದು 199 ಮೀನುಗಾರರ ಬಿಡುಗಡೆ ಮಾಡಿ ಭಾರತಕ್ಕೆ ವಾಪಸ್ ಕಳುಹಿಸಿ ಎಂದು ಸರ್ಕಾರಿ ಸಚಿವಾಲಯ ಹೇಳಿದೆ ಎಂದು ಸಿಂಧ್‌ನ ಜೈಲು ಮತ್ತು ತಿದ್ದುಪಡಿ ವಿಭಾಗದ ಉನ್ನತ ಪೊಲೀಸ್ ಅಧಿಕಾರಿ ಕಾಜಿ ನಜೀರ್ ತಿಳಿಸಿದ್ದಾರೆ.
ಮೀನುಗಾರರನ್ನು ಲಾಹೋರ್‌ಗೆ ಕಳುಹಿಸಲಾಗುವುದು. ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ಸದ್ಯ ಈ ಮೀನುಗಾರರನ್ನು ಪಾಕಿಸ್ತಾನದ ಲಾಂಧಿ ಜೈಲಿನಲ್ಲಿ ಇರಿಸಲಾಗಿದೆ.
654 ಭಾರತೀಯ ಮೀನುಗಾರರು ಕರಾಚಿ ಜೈಲುಗಳಲ್ಲಿ ಇದ್ದಾರೆ. ಅಂದಾಜು 83 ಪಾಕಿಸ್ತಾನಿ ಮೀನುಗಾರರು ಭಾರತೀಯ ಜೈಲುಗಳಲ್ಲಿದ್ದಾರೆ. 654 ಭಾರತೀಯ ಮೀನುಗಾರರ ಪೈಕಿ 631 ಮಂದಿ ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.