



ಮೆಲ್ಬರ್ನ್: 2026ರ ಕಾಮನ್‌ವೆಲ್ತ್ ಕ್ರೀಡಾಕೂಟ ಆಥಿತ್ಯದಿಂದ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯವು ಹಿಂದೆ ಸರಿದಿದೆ.
ಕ್ರೀಡಾಕೂಡ ಆಯೋಜನೆಗೆ ಕನಿಷ್ಠ 2 ಶತಕೋಟಿ ಆಸ್ಟ್ರೇಲಿಯನ್ ಡಾಲರ್ (1.36 ಶತಕೋಟಿ ಯುಎಸ್ ಡಾಲರ್), ಅತ್ಯದ್ಭುತವಾಗಿ ನಡೆಸುತ್ತೇವೆ ಅಂದ್ರೆ ಸುಮಾರು 7 ಶತಕೋಟಿ ಡಾಲರ್‌ನಷ್ಟು ಹಣ ಬೇಕಾಗುತ್ತದೆ. ಅದಕ್ಕಾಗಿ ವಿಕ್ಟೋರಿಯಾ ಆತಿಥ್ಯದಿಂದ ಹಿಂದೆ ಸರಿದೆ ಎಂದು ಮೆಲ್ಬರ್ನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯದ ಪ್ರಧಾನ ಅಧಿಕಾರಿ ಡೇನಿಯಲ್ ಆಂಡ್ರ್ಯೂಸ್ ತಿಳಿಸಿದ್ದಾರೆ.
ಕಳೆದ ಬಾರಿ ಮಂಡಿಸಿದ ವಾರ್ಷಿಕ ಬಜೆಟ್‌ಗಿಂತಲೂ ಮೂರು ಪಟ್ಟು ಹೆಚ್ಚಿನ ಹಣ ಈ ಕಾರ್ಯಕ್ರಮಕ್ಕೆ ಬೇಕಾಗುತ್ತದೆ. ಅದಕ್ಕಾಗಿ ಆಸ್ಪತ್ರೆ ಮತ್ತು ಶಾಲೆಗಳಿಗೆ ಮೀಸಲಾದ ಹಣವನ್ನ ತೆಗೆಯಲಾಗುವುದಿಲ್ಲ. ಆದ್ದರಿಂದ 2026ರಲ್ಲಿ ವಿಕ್ಟೋರಿಯಾದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನೆ ಮಾಡುವುದಿಲ್ಲ. ಈ ಒಪ್ಪಂದವನ್ನು ಅಂತ್ಯಗೊಳಿಸುವಂತೆ ಕಾಮನ್‌ವೆಲ್ತ್ ಕ್ರೀಡಾಕೂಡಕ್ಕೆ ತಿಳಿಸಲು ಅಧಿಕಾರಿಗಳಿಗೆ ಹೇಳಿದ್ದೇವೆ ಎಂದು ಆಂಡ್ರ್ಯೂಸ್ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.