



ಶೀತಕ್ಕೊಂದು, ಕಫಕ್ಕೊಂದು ಜ್ವರಕ್ಕೊಂದು ಮಂಡಿ ನೋವಿಗೊಂಡು ಹೀಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಬಂದಾಗಲೆಲ್ಲಾ ಒಔಷಧಿ ಕೊಂಡು ಸೇವಿಸುತ್ತಿದ್ದವರಿಗೆ ಒಂದು ಶಾಕಿಂಗ್ ನ್ಯೂಸ್ ಇದೆ ಅದೇನಂದ್ರೆ ರಾಜ್ಯದಲ್ಲಿ ಒಟ್ಟು 26 ಅಪಾಯಕಾರಿ ನಕಲಿ ಬ್ರಾಂಡ್ ನ ಔಷಧಿಗಳು ರಾಜ್ಯದಲ್ಲಿ ಪತ್ತೆಯಾಗಿವೆ. ನೀವು ಈಗಾಗಲೇ ತಗೊಂಡಿರೋ ಔಷಧಿಗಳಲ್ಲಿ ಈ ನಕಲಿ ಬ್ರಾಂಡ್ ಕೂಡ ಇರಬಹುದು!
ಹೌದು ಜನರು ಸಾಮಾನ್ಯವಾಗಿ ಸೇವಿಸುವ 26 ಔಷಧಗಳಲ್ಲಿ ಎಂಟು ನಕಲಿ ಮತ್ತು 18 ತಪ್ಪಾಗಿ ಬ್ರಾಂಡ್ ಮಾಡಲಾಗಿರುವವು ಎಂದು ಆರೋಗ್ಯ ಇಲಾಖೆ ಪತ್ತೆಹಚ್ಚಿದೆ. ಅಂದ ಹಾಗೆ ಇದು ಯಾಕೆ ಅಪಾಯಕಾರಿ ಅಂದರೆ ಇದನ್ನು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯನ್ನು ಉಲ್ಲಂಘಿಸಿ ಈ ಔಷಧಿಗಳನ್ನು ಉತ್ಪಾದಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ.
26 ಔಷಧಿಗಳಲ್ಲಿ ಮೂಗು ಕಟ್ಟುವಿಕೆ ನಿವಾರಣೆಗೆ ಬಳಸಲಾದ 10 ಔಷಧಗಳು ಕಾಯ್ದೆಯನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಕಣ್ಣಿನ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಒಣ ಕಣ್ಣುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ನಾಲ್ಕು ಔಷಧಗಳು, ಎರಡು ನೋವು, ಉರಿಯೂತ ಮತ್ತು ಸಂಧಿವಾತ ಮತ್ತು ಅಲರ್ಜಿಗಳಂತಹ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಔಷಧಗಳು ನಕಲಿ ಅಥವಾ ತಪ್ಪಾದ ಬ್ರಾಂಡೆಡ್ ಎಂದು ಲೇಬಲ್ ಮಾಡಲಾಗಿದೆ. ಅಂತೂ ಜನರು ನಂಬಿಕೆಯಿಂದ ತೆಗೆದುಕೊಳ್ಳುವ ಔಷಧಿಗಳಲ್ಲೂ ನಕಲಿ ಔಷಧಿ ಬರುತ್ತಿರುವುದು ಜನರ ವಿಪರ್ಯಾಸ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.