logo
WhatsApp Image 2026-04-02 at 14.46.04.jpeg
hindalco everlast.jpeg

ಜೋಯಾಲುಕ್ಕಾಸ್ ನ 305.84 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ರಾಜ್ಯ
share whatsappshare facebookshare telegram
25 Feb 2023
post image

ತಿರುವನಂತಪುರ: ಕೇರಳ ಮೂಲದ ಪ್ರಸಿದ್ಧ ಉದ್ಯಮಿ, ಜೋಯ್‌ ಆಲುಕ್ಕಾಸ್‌ ಗ್ರೂಪ್‌ನ ಎಂ.ಡಿ ಜೋಯ್‌ ಆಲುಕ್ಕಾಸ್‌ ಮೇಲೆ ಶುಕ್ರವಾರ ಇ.ಡಿ ದಾಳಿ ನಡೆಸಿದೆ. ಫೆ. 24 ರಂದು ಜೋಯ್‌ ಆಲುಕ್ಕಾಸ್‌ ಅವರ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, ಬರೋಬ್ಬರಿ 305.84 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ ಮಾಡಿರುವುದಾಗಿ ತಿಳಿಸಿದೆ.

ದುಬೈನಿಂದ ಹವಾಲಾ ಮೂಲಕ ದೊಡ್ಡ ಮಟ್ಟದಲ್ಲಿ ಹಣ ವರ್ಗಾಯಿಸಿದ ಮಾಹಿತಿ ಆಧರಿಸಿ ಜೋಯ್‌ ಆಲುಕ್ಕಾಸ್‌ ಮೇಲೆ ಶುಕ್ರವಾರ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಮೂಲಕ ಜಾಗತಿಕ ಚಿನ್ನಾಭರಣದ ಬೃಹತ್ ಸಂಸ್ಥೆ ಸೆಕ್ಷನ್‌ 4ನ್ನು ಉಲ್ಲಂಘಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಣವನ್ನು ದುಬೈನಲ್ಲಿರುವ ಜೋಯ್‌ ಆಲುಕ್ಕಾಸ್‌ ವರ್ಗೀಸ್‌ ಅವರ ಜೋಯ್‌ ಆಲುಕ್ಕಾಸ್‌ ಜುವೆಲ್ಲರಿಯಲ್ಲಿ ಹೂಡಿಕೆ ಮಾಡಲಾಗಿತ್ತು ಎಂದೂ ಮಾಹಿತಿ ನೀಡಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.