



ವಿಯೆನ್ನಾ: ಜಗತ್ತಿನ ಅತ್ಯಂತ ಹಳೆಯ ಪತ್ರಿಕೆಗಳಲ್ಲಿ ಒಂದಾದ 320 ವರ್ಷಗಳ ಹಿಂದೆ ಆರಂಭವಾದ ದಿನಪತ್ರಿಕೆಯೊಂದು ತನ್ನ ದೈನಂದಿನ ಮುದ್ರಣವನ್ನು ಕೊನೆಗೊಳಿಸಿದ್ದು, ಪತ್ರಿಕೆಯ ಕೊನೆಯ ಪ್ರತಿಯ ಚಿತ್ರ ವೈರಲ್ ಆಗಿದೆ.
ವಿಯೆನ್ನಾ ಮೂಲದ ವೀನರ್ ಝೈತುಂಗ್ 320 ವರ್ಷಗಳ ನಂತರ ತನ್ನ ದೈನಂದಿನ ಮುದ್ರಣವನ್ನು ಕೊನೆಗೊಳಿಸುತ್ತಿದೆ. ತನ್ನ ಕೊನೆಯ ಪ್ರತಿಯ ಮುಖಪುಟದಲ್ಲಿ ” 116,840 ದಿನಗಳು , 3,839 ತಿಂಗಳುಗಳು , 320 ವರ್ಷಗಳು , 12 ಅಧ್ಯಕ್ಷರು , 10 ಚಕ್ರವರ್ತಿಗಳು , 2 ಗಣರಾಜ್ಯಗಳು , 1 ಪತ್ರಿಕೆ ” ಎಂದು ಮುದ್ರಿಸಿದೆ. ಈ ಚಿತ್ರ ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗಿದೆ.
1703ರ ಆಗಸ್ಟ್ ನಲ್ಲಿ ಪ್ರಾರಂಭವಾದ ಪತ್ರಿಕೆಯು ಹೊಸ ಆಸ್ಟ್ರಿಯನ್ ಕಾನೂನಿನ ನಂತರ ಆದಾಯದಲ್ಲಿ ತೀವ್ರ ಕುಸಿತವನ್ನು ಕಂಡಿದ್ದು, ಇದೀಗ ಶಾಶ್ವತವಾಗಿ ಸ್ಥಗಿತಗೊಳ್ಳಲಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.