



ಕಾಪು : ಸಮಾಜ ಸೇವಾ ವೇದಿಕೆ ಇದರ ವತಿಯಿಂದ ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತಿದ್ದ ಸುಮಾರು ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಆರ್ಥಿಕವಾಗಿ ತುಂಬಾ ಕಷ್ಟದಲ್ಲಿರುವ ಉಚ್ಚಿಲ ಗ್ರಾಮದ ಬಡ ಕುಟುಂಬದ ಮನೆಗೆ ಭೇಟಿ ನೀಡಿ ಅವರ ಸಂಬಂದಿಕರಲ್ಲಿ 35 ಸಾವಿರ ರೂಪಾಯಿಯನ್ನು ನೀಡಲಾಯಿತು ಈ ಸಂದರ್ಭದಲ್ಲಿ ಮನೆಯವರು ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಹಾಗೂ ಅವರ ತಂಡದೊಂದಿಗೆ ಮಾತನಾಡಿ ಮುಂದೆಯೂ ಹೆಚ್ಚಿನ ಚಿಕಿತ್ಸೆಗೆ ಲಕ್ಷ ಗಟ್ಟಲೆ ಹಣ ಬೇಕಾಗಿದ್ದು ಸರಕಾರದ ಪರ ಹಾಗೂ ಇತರ ಸಂಘ ಸಂಸ್ಥೆಯವರು ಕೂಡ ಸ್ಪಂದಿಸುವ ನಿಟ್ಟಿನಲ್ಲಿ ನಲ್ಲಿ ಮನವಿ ಮಾಡಿದರು ಈ ಸಂದರ್ಭದಲ್ಲಿ ವೇದಿಕೆ ಗೌರವಾಧ್ಯಕ್ಷರಾದ ದಿವಾಕರ ಬಿ ಶೆಟ್ಟಿ ಕಳತ್ತೂರು ಸಂಚಾಲಕರಾದ ದಿವಾಕರ ಡಿ ಶೆಟ್ಟಿ ಕಳತ್ತೂರು ಗೌರವ ಸಲಹೆಗಾರರದ ದಯಾನಂದ ಕೆ ಶೆಟ್ಟಿ ದೆಂದೂರು ಉಪಾಧ್ಯಕ್ಷರಾದ ಅಶೋಕ್ ಶೇರಿಗಾರ್ ಅಲೆವೂರು ಸಂಯೋಜಕರಾದ ದಿನೇಶ್ ಮೂಲ್ಯ ಅಲೆವೂರು ಉಪಸ್ಥಿತರಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.