



ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆಯ ಹೊರಡಿಸಿದ ಮರು ಮೌಲ್ಯಮಾಪನ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾದ ಶರಣ್ಯ ಎಸ್. ಹೆಗ್ಡೆ ಇಂಗ್ಲೀಷ್‌ನಲ್ಲಿ ೨, ಕನ್ನಡದಲ್ಲಿ ೧ ಹೆಚ್ಚುವರಿ ಅಂಕ ಪಡೆದು ಒಟ್ಟು ೫೯೪ ಅಂಕದೊಂದಿಗೆ ರಾಜ್ಯಕ್ಕೆ ನಾಲ್ಕನೇ ಹಾಗೂ ಉಡುಪಿ ಜಿಲ್ಲೆಗೆ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ. ಮತ್ತು ಆಕಾಶ್ ಪೈ ಇಂಗ್ಲೀಷ್‌ನಲ್ಲಿ ೩, ವ್ಯವಹಾರ ಅಧ್ಯಯನದಲ್ಲಿ ೨ ಅಂಕಗಳನ್ನು ಹೆಚ್ಚುವರಿ ಪಡೆದು ಒಟ್ಟು ೫೯೩ ಅಂಕಗಳನ್ನು ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ರೋಹಿತ್ ಹೆಗ್ಡೆ ಇಂಗ್ಲೀಷ್‌ನಲ್ಲಿ ೬, ರಸಾಯನಶಾಸ್ತçದಲ್ಲಿ ೩ ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು ಒಟ್ಟು ೫೯೩ ಅಂಕಗಳೊAದಿಗೆ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ. ಮನೋಜ್ ಎಂ.ಟಿ ರಸಾಯನಶಾಸ್ತ್ರದಲ್ಲಿ ೧೯ ಹೆಚ್ಚುವರಿ ಅಂಕ ಪಡೆದು ೫೪೮ ಅಂಕ ಪಡೆದಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.