



ಉಡುಪಿ : ಕೋವಿಡ್ 19ರ ಅಡೆತಡೆಯಿಂದ 2020 ಮಾರ್ಚ್ ತಿಂಗಳಿಂದ, ಮೊನ್ನೆಯ 2021 ಆಕ್ಟೋಬರ್ ತಿಂಗಳವರೆಗೂ ಯಾವುದೇ ಕಾರ್ಯಕ್ರಮಗಳು ಪೂರ್ಣ ಪ್ರಮಾಣದಲ್ಲಿ ನಡೆಸಲಾಗದೆ ಸಭಾಭವನದ ಮಾಲಿಕರಾಗಿದ್ದು ಮತ್ತು ಇದಕ್ಕೆ ಹೊಂದಿಕೊಂಡು ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಜನ ಅಸಂಘಟಿತ ಮತ್ತು ಅವಿದ್ಯಾವಂತ ಬಡಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದಾರೆ
ಇನ್ನೇನು ಕಾರ್ಯಕ್ರಮಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುವ ಹಂತದಲ್ಲಿ 3ನೇ ಅಲೆಯ ಸೂಚನೆಯ ಮೇರೆಗೆ ಸಭಾಂಗಣದಲ್ಲಿ ಮಾಡುವ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಅವೈಜ್ಞಾನಿಕವಾಗಿ 100ರಿಂದ 200 ಜನರ ಒಗ್ಗೂಡುವಿಕೆಯ ಅನುಮತಿಯ ನಿರ್ಧಾರವನ್ನು ಸರ್ಕಾರ ಕೈಗೆತ್ತಿಕೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅಲ್ಲದೇ ಸಿನಿಮಾ ಮಂದಿರ ಪಾರ್ಕ್ ಜಿಮ್ ಸೆಂಟರ್‌ಗಳಲ್ಲಿ ಶೇಕಡಾ 50% ಅನುಮತಿಯನ್ನು ನೀಡಿದ್ದು ಸಭಾಭವನಗಳಿಗೆ ಈ ಅವಕಾಶಗಳಿಂದ ವಂಚಿತರನ್ನಾಗಿಸಿ ಮಲತಾಯಿ ಧೋರಣೆಯನ್ನು ಮಾಡಿರುವುದು ವಿಷಾದನಿಯ. ಈ ನಿರ್ಧಾರದಿಂದ ಹಲವಾರು ಕುಟುಂಬಗಳು ತಮ್ಮ ಕೌಟುಂಬಿಕ ಕಾರ್ಯಕ್ರಮಗಳನ್ನು ಮನೆಯಲ್ಲಿಯೇ ಮಾಡುವ ನಿರ್ಧಾರವನ್ನು ತೆಗೆದುಕೊಂಡು ಸರಿಯಾದ ಮೂಲಭೂತ ಸೌಕರ್ಯ ಇಲ್ಲದೇ ಕಾರ್ಯಕ್ರಮ ನೇರವೇರಿಸುವುದು ಕೋವಿಡ್ ಹರಡುವಿಕೆಗೆ ಮೂಲ ಕಾರಣವಾಗಿರುತ್ತದೆ ಅಲ್ಲದೇ ಸರ್ಕಾರಕ್ಕೆ ಕೊಟ್ಯಾಂತರ ರೂ. ತೆರಿಗೆ ನಷ್ಟ ಆಗಲಿದೆ
ಈಗಾಗಲೇ ನಿಗದಿಯಾದ ಕಾರ್ಯಕ್ರಮಗಳಿಗೆ ಆಮಂತ್ರಣ ಪತ್ರಿಕೆಗಳು ತಲುಪಿದ್ದು ಕಾರ್ಯಕ್ರಮಕ್ಕೆ ಆಮಂತ್ರಣ ಪತ್ರಿಕೆಯನ್ನು ಪಾಸ್ ಪರಿಗಣಿಸಿ ಕಾರ್ಯಕ್ರಮವನ್ನು ಮುಂದುವರಿಸಲು ಅವಕಾಶ ಕೊಟ್ಟು ಬರುವವರಿಗೆ ಆಮಂತ್ರಣ ಪತ್ರಿಕೆಯನ್ನು ಪಾಸ್ ರೀತಿಯಲ್ಲಿ ಬಳಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.,ಬೇರೆ ಎಲ್ಲಾ ವ್ಯಾಪಾರ ವಹಿವಾಟುಗಳಿಗೆ ನಿಗದಿಪಡಿಸಿದಂತೆ 50:50 ಅನುಪಾತದಲ್ಲಿ ಸಭಾಂಗಣದ ಆಸನಗಳ ಶೇ.50ರಷ್ಟು ಜನರ ಕೂಡುವಿಕೆಗೆ ಅವಕಾಶ ಕಲ್ಪಿಸಬೇಕೆಂದು ಸರ್ಕಾರವನ್ನು ಕೇಳಿಕೊಳ್ಳುವ ನಿರ್ಣಯ. ಮದುವೆ ಸಮಾರಂಭಗಳ ಜೊತೆಗೆ ಅದಕ್ಕೆ ಸಂಬಂಧಿಸಿದ ಇತರೇ, ಕೌಟುಂಬಿಕ ಕಾರ್ಯಕ್ರಮಗಳನ್ನು ನಡೆಸುವರೇ ಅನುಮತಿಯನ್ನು ನೀಡಬೇಕು. ತಜ್ಞರು ಈ ಬಗ್ಗೆ ಹೆಚ್ಚು ಗಂಭೀರವಾಗಿ ಆಲೋಚನೆ ಮಾಡಿದಂತಿಲ್ಲ, ಹೋಟೆಲ್ ರೆಸಾರ್ಟ್ ಗಳಿಗೆ ನೀಡುತ್ತಿರುವ 50% ಆಸ್ತಿತೆರಿಗೆ ರಿಯಾಯಿತಿ ಯನ್ನು ಸಭಾಂಗಣಗಳಿಗೂ ನೀಡಿ ಆದೇಶ ಹೊರಡಿಸಿ ಜಿಲ್ಲಾ ಸಭಾಭವನಗಳ ಒಕ್ಕೂಟದ ಅಧ್ಯಕ್ಷ ರು ಹಾಗು ಜಿಲ್ಲಾಧಿಕಾರಿಗೆ ಮನವಿಸಲ್ಲಿಸಿದರು . ಇದೆ ಸಂದರ್ಭದಲ್ಲಿ ಜಿಲ್ಲಾ ಸಭಾಭವನಗಳ ಒಕ್ಕೂಟದ ಉಪಾಧ್ಯಕ್ಷ ಜಯರಾಜ್ ಹೆಗ್ಡೆ, ಖಜಾಂಚಿ ರಂಜನ್ ಕಲ್ಕೂರ್, ಸಿಟಿ ಸೆಂಟರ್‌ನ ಮಾಲಕ ಚಂದ್ರಶೇಖರ್ ಶೆಟ್ಟಿ, ಎರ್ಮಾಳು ಶಶಿಧರ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.