



ಶಿರೂರು: ರೈಲು ಡಿಕ್ಕಿಯಾಗಿ ಆರು ಹಸುಗಳು ಮೃತಪಟ್ಟ ಘಟನೆ ಶಿರೂರು ಮೇಲ್ಪಂಕ್ತಿ ಸಮೀಪ ನಡೆದಿದೆ. ಸ್ಥಳೀಯರು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಬಿಜೂರೂ ಹಾಗೂ ಬೈಂದೂರು ಬಜರಂಗದಳ ಸಂಯೋಜಕ ಸುಧಾಕರ್ ನೆಲ್ಯಾಡಿ ಅವರಿಗೆ ಮಾಹಿತಿ ನೀಡಿದ್ದರು. ಅದರಂತೆ ತಕ್ಷಣ ಅಲ್ಲಿಗೆ ಧಾವಿಸಿದ ಸುಧಾಕರ್ ನೆಲ್ಯಾಡಿ, ಗೌರೀಶ್ ಹುದಾರ್, ಬೈಂದೂರು ನಗರ ಸಂಯೋಜಕ ಗುರುರಾಜ್ ಕಲ್ಕಂಟ, ಬೈಂದೂರು ಭಜರಂಗದಳ ಸಹ ಸಂಯೋಜಕ ಗಿರೀಶ್, ದೊಂಬೆಯ ದಿಲೀಪ್ ,ಯೋಗೀಶ್ ಹಾಗೂ ಇತರ ಕಾರ್ಯಕರ್ತರ ಜೊತೆಗೂಡಿ 4 ಗಂಟೆಗಳ ಕಾರ್ಯಾಚರಣೆ ಮಾಡಿ ಮೃತಪಟ್ಟ ಗೋವುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೊತ್ತು ಸಾಗಿಸಿ ಅಂತ್ಯಕ್ರಿಯೆ ನಡೆಸಿದ್ದಾರೆ. ಶಿರೂರು ಪಂಚಾಯತ್ ಸದಸ್ಯ ಉದಯ್ ಪೂಜಾರಿ ಸಹಕಾರ ನೀಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.