



ಚಿಕಾಗೊ: ಅಮೆರಿಕ ಸ್ವಾತಂತ್ರ್ಯ ದಿನದ ಪರೇಡ್ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು ಘಟನೆಯಲ್ಲಿ 6 ಮಂದಿ ಮೃತರಾಗಿದ್ದಾರೆ. 36 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ ಅಮೆರಿಕ ದ ಚಿಕಾಗೊ ದ ಹೈಲ್ಯಾಂಡ್ ಪಾರ್ಕ್ ಪ್ರಾಂತ್ಯದ ಲ್ಲಿ ಸ್ವಾತಂತ್ರ್ಯ ಪರೇಡ್‌ನ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಈ ಸಂಬಂಧ ರಾಬರ್ಟ್ ಇ. ಕ್ರಿಮೊ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಪರೇಡ್ ನಡೆಯುತ್ತಿದ್ದ ಜಾಗದಲ್ಲಿ ಮೇಲ್ಛಾವಣಿಯೊಂದರ ಮೇಲಿಂದ ಕ್ರೀಮೋ ಎಂಬಾತ ಗುಂಡಿನ ದಾಳಿ ನಡೆಸಿ 6 ಜನರ ಸಾವಿಗೆ ಕಾರಣವಾಗಿದ್ದಾನೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.