



ಬೆಂಗಳೂರು: ಹಿರಿಯ ಪತ್ರಕರ್ತ-ಸುದ್ದಿ ನಿರೂಪಕ ಗೌರೀಶ್ ಅಕ್ಕಿ ನೇತೃತ್ವದ ಆಲ್ಮಾ ಮೀಡಿಯಾ ಸ್ಕೂಲ್‌ನ "ಡಿಪ್ಲೋಮಾ ಇನ್ ಪ್ರಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್ಮೆಂಟ್" ಕೋರ್ಸ್- ಜನವರಿ 2023ನೇ ಹೊಸ ಬ್ಯಾಚ್ ಉದ್ಘಾಟನೆ ಸಮಾರಂಭ ಇಂದು ಆಲ್ಮಾ ಮೀಡಿಯಾ ಸ್ಕೂಲ್ ಆವರಣದಲ್ಲಿ ಜರುಗಿತು. ಈ ಕಾರ್ಯಕ್ರಮಕ್ಕೆ ಕಲರ್ಸ್ ಕನ್ನಡ ವಾಹಿನಿಯ ಕ್ಲಸ್ಟರ್ ಬಿಸಿನೆಸ್ ಹೆಡ್ ಪರಮ್ ಗುಂಡ್ಕಲ್ ಮತ್ತು ವಿಸ್ತಾರ ನ್ಯೂಸ್ ಪ್ರೈವೇಟ್ ಲಿಮಿಟೆಡ್‌ನ ಪ್ರಧಾನ ಸಂಪಾದಕ ಮತ್ತು ಸಿಇಒ ಹರಿಪ್ರಕಾಶ್ ಕೋಣೆಮನೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹೊಸ ದಿಗಂತ ಪತ್ರಿಕೆಯ ಪ್ರಧಾನ ಸಂಪಾದಕ-ಆಲ್ಮಾ ಮೀಡಿಯಾ ಸ್ಕೂಲ್‌ನ ಪ್ರಾಧ್ಯಾಪಕರಾದ ವಿನಾಯಕ ಭಟ್ ಮೂರೂರು, ಪ್ರಾಧ್ಯಾಪಕ ಅಕ್ಷಯ್ ಹೆಗಡೆ, ಪ್ರಾಧ್ಯಾಪಕಿ ಶ್ರೀಮತಿ ಮಾಲತಿ ಗೌರೀಶ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ್ದಲ್ಲದೇ, ಸೆಪ್ಟೆಂಬರ್ 2022ನೇ ಸಾಲಿನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಸಹ ವಿತರಿಸಲಾಯಿತು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾನಾಡಿದ ಶ್ರೀ ಹರಿಪ್ರಕಾಶ್ ಕೋಣೆಮನೆ, ವಿಸ್ತಾರ ನ್ಯೂಸ್ ಚಾನೆಲ್ ಪ್ರಾರಂಭಿಸುವಾಗಿನ ಎದುರಿಸಿದ ಸವಾಲುಗಳು, ಒಬ್ಬ ಪತ್ರಕರ್ತ ಹೇಗಿರಬೇಕು, ಪತ್ರಿಕೋದ್ಯಮದಲ್ಲಿ ಭಾಷೆಯ ಪ್ರಾಮುಖ್ಯ, ಡಿಜಿಟಲ್ ಮಾಧ್ಯಮದ ವಿಸ್ತಾರ ಮುಂತಾದ ವಿಚಾರಗಳನ್ನು ಕುರಿತು ಮಾತನಾಡಿದರು. "ಪುಸ್ತಕಗಳನ್ನು ಓದದೇ ಒಬ್ಬ ಪತ್ರಕರ್ತ ಪಕ್ವವಾಗೋಕೆ ಸಾಧ್ಯವಿಲ್ಲ. ಹೇಳಿದ್ದನ್ನ ಕೇಳಿದ್ದನ್ನ ವರದಿ ಮಾಡುವ ಪತ್ರಿಕೋದ್ಯಮಕ್ಕೆ ಭವಿಷ್ಯವಿಲ್ಲ.." ಎಂಬ ಮಾತುಗಳನ್ನು ತಿಳಿಸಿದರು. ಪರಮ್ ಗುಂಡ್ಕಲ್ ಅವರು ಆಲ್ಮಾ ಮೀಡಿಯಾ ಸ್ಕೂಲ್‌ಗೆ ಆಗಮಿಸಿದ ಖುಷಿಯನ್ನು ಹಂಚಿಕೊಳ್ಳುತ್ತ, ವಿದ್ಯಾರ್ಥಿಗಳಿಗೆ ಮನೋರಂಜನೆ ಕ್ಷೇತ್ರದ ಮಹತ್ತ್ವವನ್ನು, ಮನೋರಂಜನೆ ಕ್ಷೇತ್ರದಲ್ಲಿರುವ ಅಪಾರ ಅವಕಾಶಗನ್ನು ಮತ್ತು ಸೃಜನಶೀಲ ಬರವಣಿಗೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. "ನಿಮ್ಮ ಆಸಕ್ತಿಕರ ಕ್ಷೇತ್ರ ಯಾವುದೆಂದು ಅರಿತುಕೊಂಡ ಅದರಲ್ಲಿ ತೊಡಗಿಸಿಕೊಳ್ಳಿ" ಎಂಬ ಕಿವಿಮಾತನ್ನು ವಿದ್ಯಾರ್ಥಿಳಿಗೆ ಹೇಳಿದರು.
ಕಳೆದ ಐದು ವರ್ಷಗಳಿಂದ ಪ್ರಾಯೋಗಿಕ ಪತ್ರಿಕೋದ್ಯಮ ತರಬೇತಿಯಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಆಲ್ಮಾ ಮೀಡಿಯಾ ಸ್ಕೂಲ್, ಗೌರೀಶ್ ಅಕ್ಕಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಪತ್ರಿಕೋದ್ಯಮ ಆಕಾಂಕ್ಷಿಗಳಿಗೆ ಪ್ರಾಯೋಗಿಕ ಶಿಕ್ಷಣದ ಜೊತೆಗೆ ಹೊಸ ತಂತ್ರಜ್ಞಾನಗಳ ಸಮರ್ಪಕ ಕಲಿಕೆ, ತರಬೇತಿಯ ಬಳಿಕ ಪ್ಲೇಸ್ಮೆಂಟ್ ಒದಗಿಸುವುದು ಸಹ ಆಲ್ಮಾದ ವೈಶಿಷ್ಟ್ಯ. ಇದೀಗ ಆಲ್ಮಾದ 6ನೇ ಬ್ಯಾಚ್ ಉದ್ಘಾಟನೆಯಾಗಿದ್ದು, ನಾಳೆಯಿಂದ ತರಗತಿಗಳು ಆರಂಭವಾಗಲಿವೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.