logo
WhatsApp Image 2026-04-02 at 14.46.04.jpeg
hindalco everlast.jpeg

ನಗರದ ಪುತ್ತಿಗೆ ಮಠದಲ್ಲಿ 7 ಲಕ್ಷ ರೂ. ಮೌಲ್ಯದ ಚಿನ್ನದ ಗಿಂಡಿ ಕಳವು: ಪುರೋಹಿತನ ವಿರುದ್ಧ ಶಂಕೆ

ಟ್ರೆಂಡಿಂಗ್
share whatsappshare facebookshare telegram
29 Jul 2022
post image

ಉಡುಪಿ:

ಉಡುಪಿ ಶ್ರೀಕೃಷ್ಣ ಮಠದ ಬಳಿಯ ಪುತ್ತಿಗೆ ಮಠದಲ್ಲಿ 7 ಲಕ್ಷ ರೂ. ಮೌಲ್ಯದ ಚಿನ್ನದ ಗಿಂಡಿ ಕಳವಾಗಿರುವ ಘಟನೆ ನಡೆದಿದೆ. ಜು.26 ರಂದು ಬೆಳಿಗ್ಗೆ ಮಠದಲ್ಲಿ ಪೂಜೆಯ ಸಂದರ್ಭದಲ್ಲಿ 6 ಜನ ಮಠದ ವಿದ್ಯಾರ್ಥಿಗಳು ಮತ್ತು ಪುರೋಹಿತ ಲಕ್ಷ್ಮಿ ಪ್ರಸಾದ್ ರವರು ಬಂದು ಹೋಗಿದ್ದು, ಪೂಜೆಯ ನಂತರ ಪೂಜಾ ಸಾಮಾಗ್ರಿಗಳನ್ನು ತೆಗೆದು ಇಡುವಾಗ 7 ಲಕ್ಷ ರೂಪಾಯಿ ಮೌಲ್ಯದ 146 ಗ್ರಾಂ ತೂಕದ ಚಿನ್ನದ ಗಿಂಡಿ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಈ ಚಿನ್ನದ ಗಿಂಡಿಯನ್ನು ಪುರೋಹಿತ ಲಕ್ಷ್ಮಿ ಪ್ರಸಾದ್ ಅವರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಅನುಮಾನ ಇರುವುದಾಗಿ ಪುತ್ತಿಗೆ ಮಠದಲ್ಲಿ ವ್ಯವಸ್ಥಾಪಕರಾಗಿರುವ ವಿಷ್ಣುಮೂರ್ತಿ ಇವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.