logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮದ 75 ನೇ ಸ್ವಾತಂತ್ರ್ಯೋತ್ಸವ: ಸ್ವದೇಶಿ ಭಾವ ಯುವ ಜನತೆಯಲ್ಲಿ ಜಾಗೃತಿಗೊಳ್ಳಲಿ- ನಿವೃತ್ತ ಏರ್ ವೈಸ್‌ ಮಾರ್ಷಲ್‌ ಶ್ರೀ ರಮೇಶ್‌ ಕಾರ್ಣಿಕ್‌

ಟ್ರೆಂಡಿಂಗ್
share whatsappshare facebookshare telegram
15 Aug 2022
post image

ಕಾರ್ಕಳ: ದೇಶದ ಇತಿಹಾಸವನ್ನು ಅರಿಯದೇ ಇದ್ದಲ್ಲಿ ಇತಿಹಾಸವನ್ನು ಸೃಜಿಸಲು ಅಸಾಧ್ಯ. ಹಿಂದೆ ಆದ ಐತಿಹಾಸಿಕ ದುರ್ಘಟನೆಗಳಿಂದ ಪಾಠ ಕಲಿತು ಸಂಪೂರ್ಣ ಸ್ವದೇಶಿ ಭಾವ ಭಾರತದ ಯುವಕ-ಯುವತಿಯರಲ್ಲಿ ಜಾಗೃತಗೊಂಡು ದೇಶ ಸೇವೆಯೇ ಗುರಿಯಾಗಿರಲಿ ಎಂದು ನಿವೃತ್ತ ಏರ್ ವೈಸ್‌ ಮಾರ್ಷಲ್‌ ಶ್ರೀ ರಮೇಶ್‌ ಕಾರ್ಣಿಕ್‌ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಕಳದ ಕ್ರಿಯೇಟಿವ್‌ ಪ ಪೂ ಕಾಲೇಜಿನಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಸಮಾರಂಭದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ, ಸ್ವಾತಂತ್ರ್ಯ ದಿನದ ಸಂದೇಶ ನೀಡಿದರು. ವಿಶ್ವದ ಬಲಾಢ್ಯ ರಾಷ್ಟ್ರಗಳ ಸಾಲಿನಲ್ಲಿ ಭಾರತವು ಕಂಗೊಳಿಸುತ್ತಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರವು ಭೌಗೋಳಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಉನ್ನತಿ ಪಡೆಯಲಿ ಅದಕ್ಕೆ ಇಂದಿನ ಯುವ ಸಮೂಹವೇ ಮುಂದಾಳತ್ವ ವಹಿಸಲಿ ಎಂದು ಹಾರೈಸಿದರು. ಈ ವಿಜೃಂಭಣೆಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕ್ರಿಯೇಟಿವ್‌ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ವಿದ್ವಾನ್‌ ಗಣಪತಿ ಭಟ್‌, ಗಣನಾಥ ಶೆಟ್ಟಿ, ಅಮೃತ್‌ ರೈ, ಆದರ್ಶ ಎಂ ಕೆ, ಅಶ್ವಥ್‌ ಎಸ್‌ ಎಲ್‌, ವಿಮಲ್‌ ರಾಜ್‌, ಗಣಪತಿ ಭಟ್‌ ಕೆ ಎಸ್‌ ಹಾಗೂ ವಿದ್ಯಾಸಂಸ್ಥೆಯ ಉಪನ್ಯಾಸಕ ವೃಂದದವರು, ಉಪನ್ಯಾಸಕೇತರ ಬಳಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕರಾದ ರಾಜೇಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಹಿನ್ನಲೆ ಗಾಯಕಿ ನಿನಾದ ನಾಯಕ್‌ ಮತ್ತು ತಂಡದವರಿಂದ ದೇಶಭಕ್ತಿಯನ್ನು ಬಿಂಬಿಸುವ ಸಧಬಿರುಚಿಯ “ಕ್ರಿಯೇಟಿವ್‌ ಸವಿಗಾನ” ಸಂಗೀತ ಕಾರ್ಯಕ್ರಮ ನೆರವೇರಿತು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.