



ಐದು ವರ್ಷಗಳಲ್ಲಿ ಭಾರತ ದೇಶದಲ್ಲಿ ಬರೊಬ್ಬರಿ 7.77 ಲಕ್ಷ ರಸ್ತೆ ಅಪಘಾತ ಸಾವುಗಳು ಸಂಭವಿಸಿದ್ದು, ಅತೀ ಹೆಚ್ಚು ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರ 5ರಲ್ಲಿದೆ.
ಕಳೆದ 5 ವರ್ಷಗಳಲ್ಲಿ ಅಂದರೆ 2018ರಿಂದ 2022ರ ಅವಧಿಯಲ್ಲಿ ಭಾರತದಾದ್ಯಂತ 7.77 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತ ಸಾವುಗಳು ಸಂಭವಿಸಿವೆ. ಈ ಪೈಕಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ಅತಿ ಹೆಚ್ಚು ರಸ್ತೆ ಅಪಘಾತಗಳಿಗೆ ಸಾಕ್ಷಿಯಾಗಿವೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
ಇನ್ನು ಈ ಪಟ್ಟಿಯಲ್ಲಿ ಮಧ್ಯಪ್ರದೇಶ 4 ಮತ್ತು ಕರ್ನಾಟಕ 5ನೇ ಸ್ಥಾನದಲ್ಲಿದ್ದು, ಮಧ್ಯಪ್ರದೇಶದಲ್ಲಿ 58,580 ರಸ್ತೆ ಅಪಘಾತ ಸಂಭವಿಸಿದ್ದು, ಕರ್ನಾಟಕದಲ್ಲಿ 53,448 ರಸ್ತೆ ಅಪಘಾತ ಸಾವುಗಳು ವರದಿಯಾಗಿವೆ.
ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ದತ್ತಾಂಶವನ್ನು ಆಧರಿಸಿದ ವರದಿಯ ಅನ್ವಯ, '2018 ಮತ್ತು 2022 ರ ನಡುವೆ ರಸ್ತೆ ಸಾವುಗಳಲ್ಲಿ ಆತಂಕಕಾರಿ ಏರಿಕೆಯಾಗಿದೆ.
ದೇಶದಲ್ಲಿ ಒಟ್ಟು ರಸ್ತೆ ಅಪಘಾತ ಸಾವುಗಳ ಸಂಖ್ಯೆ 2022 ರಲ್ಲಿ 1,68,491 ಕ್ಕೆ ತಲುಪಿದ್ದು, ಇದು 2021 ರಲ್ಲಿ 1,53,972ರಷ್ಟಿತ್ತು ಎಂದು ಇತ್ತೀಚೆಗೆ ಬಿಡುಗಡೆಯಾದ 'ಭಾರತದಲ್ಲಿ ರಸ್ತೆ ಅಪಘಾತಗಳು, 2022' (Road Accidents in India, 2022)ವರದಿ ಹೇಳಿದೆ.
ಐದು ವರ್ಷಗಳಲ್ಲಿ (2018-2022) ಅತಿ ಹೆಚ್ಚು ಅಪಘಾತ ಸಾವು ಸಂಭವಿಸಿದ ಟಾಪ್ 10 ರಾಜ್ಯಗಳ ಪಟ್ಟಿ
ಉತ್ತರ ಪ್ರದೇಶ - 1,08,882 ಸಾವುಗಳು ತಮಿಳುನಾಡು - 84,316 ಸಾವುಗಳು ಮಹಾರಾಷ್ಟ್ರ - 66,370 ಸಾವುಗಳು ಮಧ್ಯಪ್ರದೇಶ - 58,580 ಸಾವುಗಳು ಕರ್ನಾಟಕ - 53,448 ಸಾವುಗಳು ರಾಜಸ್ಥಾನ - 51,280 ಸಾವುಗಳು ಆಂಧ್ರಪ್ರದೇಶ - 39,058 ಸಾವುಗಳು ಬಿಹಾರ - 36,191 ಸಾವುಗಳು ತೆಲಂಗಾಣ - 35,565 ಸಾವುಗಳು ಗುಜರಾತ್ - 36,626 ಸಾವುಗಳು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.