



ಕಾರ್ಕಳ : ಕಾರ್ಕಳ ಪುರಸಭಾ ವ್ಯಾಪ್ತಿಯ ಕರಿಯಕಲ್ಲು ರುದ್ರಭೂಮಿಯಲ್ಲಿ ಶವಗಳನ್ನು ಸುಡಲು ಬಳಸುವ ಸಿಲಿಕಾನ್ ಒಲೆಯ ಒಂದು ಬ್ಲಾಕ್ ಕಳವು ಮಾಡಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜು.15 ರಂದು ರಾತ್ರಿ ಸ್ಮಶಾನಕ್ಕೆ ನುಗ್ಗಿದ ಕಳ್ಳರು ಮೃತದೇಹಗಳನ್ನು ಸುಡುವ ನಾಲ್ಕು ಸಿಲಿಕಾನ್ ಒಲೆಯ ಬ್ಲಾಕ್ ಗಳ ಪೈಕಿ ಒಂದನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಇಂದು ಬೆಳಿಗ್ಗೆ ಮೃತದೇಹ ಸುಡಲು ತಯಾರಿ ಮಾಡುವ ಸಂದರ್ಭದಲ್ಲಿ ವಿಷಯ ಗೊತ್ತಾಗಿದೆ. ಈ ಬಗ್ಗೆ ಕಾರ್ಕಳದ ಕರಿಯಕಲ್ಲುವಿನ ರುದ್ರಭೂಮಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ರಾವ್ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.