



ಕಾರ್ಕಳ: ಹಣ ನೀಡದಕ್ಕೆ ಚೂರಿಯಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆ ಬಸ್ ನಿಲ್ದಾಣದಲ್ಲಿ ನಡೆದಿದೆ.ಸುನೀಲ್ ಟಿ. ಕುಲಾಲ್ (46)ಹಲ್ಲೆಗೊಳಗಾದವರು
ಸುನೀಲ್ ರವರಲ್ಲಿ ಸತೀಶ್ ಎಂಬಾತನು ಆಗ್ಗಾಗ್ಗೆ ಹಣವನ್ನು ಕೇಳಿ ಪಡೆಯುತ್ತಿದ್ದು ಇದೆ ವಿಚಾರವಾಗಿ ಇಬ್ಬರ ಪರಸ್ಪರ ಮಾತಿಗೆ ಮಾತು ಬೆಳೆದು ಹಲ್ಲೆ ಕೂಡ ನಡೆಸಿಕೊಂಡಿದ್ದರು.ಜು.06ರಂದು ಸುನೀಲ್ ಉಡುಪಿಗೆ ಹೋಗಲು ಸಚ್ಚೇರಿಪೇಟೆ ಬಸ್ಸು ನಿಲ್ದಾಣದ ಬಳಿ ನಿಂತುಕೊಂಡಿದ್ದಾಗ ಅಲ್ಲಿಗೆ ಬಂದ ಸತೀಶ್ ಸುನೀಲ್ ರವರಲ್ಲಿ ಕುಡಿಯಲು ಹಣ ಕೇಳಿದ್ದು ಸುನೀಲ್ ರು ತನ್ನಲ್ಲಿ ಹಣವಿಲ್ಲ ಎಂದು ಹೇಳಿ ಉಡುಪಿಗೆ ಹೋಗಿದ್ದರು
ಸುನೀಲ್ ಉಡುಪಿಯಿಂದ ವಾಪಾಸು ಸಚ್ಚೇರಿಪೇಟೆ ಬಸ್ಸು ನಿಲ್ದಾಣದಲ್ಲಿ ಬಂದು ಇಳಿದಾಗ ಅಲ್ಲಿಗೆ ಬಂದ ಸತೀಶ್ ಮತ್ತೆ ಹಣಕೊಡುವಂತೆ ಕೇಳಿದ್ದು ತನ್ನಲ್ಲಿ ಹಣ ಇಲ್ಲವೆಂದು ಹೇಳಿದ್ದರಿಂದ ಕೋಪಗೊಂಡ ಸತೀಶ್ ಕೊಲೆ ಮಾಡುವ ಉದ್ದೇಶದಿಂದ ಕೈಯ್ಯಲ್ಲಿದ್ದ ಚೂರಿಯಿಂದ ಸುನೀಲ್ ಬೆನ್ನಿಗೆ, ಎದೆಗೆ, ಎಡಕಿವಿಯ ಬಳಿ ಹಾಗೂ ಹಣೆಗೆ ಇರಿದು ಮಾರಣಾಂತಿಕ ಹಲ್ಲೆಗೈದು ಅವಾಚ್ಯ ಶಬ್ದಗಳಿಂದ ಬೈಯ್ದು, ಜೀವ ಬೆದರಿಕೆ ಹಾಕಿದ್ದಾನೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.