



ಬೆಳ್ಮಣ್ : ಬಾವಿಯೊಳಗೆ ಬಿದ್ದ ಬೆಕ್ಕನ್ನು ರಕ್ಷಿಸುವ ಸಲುವಾಗಿ ವ್ಯಕ್ತಿ ಯೊಬ್ಬರು ಬಾವಿಯೊಳಗೆ ಇಳಿದಾಗ ಹಗ್ಗ ತುಂಡಾಗಿ ಬಾವಿಗೆ ಬಿದ್ದ ಘಟನೆ ನಂದಳಿಕೆ ಗ್ರಾಮದ ಕಕ್ಕೆಪದವು ಎಂಬಲ್ಲಿ ಶನಿವಾರ ನಡೆದಿದೆ.
ಬೆಳ್ಮಣ್ ಜಂತ್ರ ನಿವಾಸಿ ಭೋಜ ಅಪಾಯಕ್ಕೆ ಸಿಲುಕಿ ಬಾವಿಗೆ ಬಿದ್ದವರು . ಅವರು ತಮ್ಮ ಪರಿಚಯಸ್ಥರ ಮನೆಯ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸುವ ಸಲುವಾಗಿ ಸೀರೆಯನ್ನು ಜೋಡಿಸಿ ಬಾವಿಗೆ ಇಳಿದ ಸಂದರ್ಭದಲ್ಲಿ ಸೀರೆ ತುಂಡಾಗಿ ಬಾವಿಗೆ ಬಿದ್ದಿದ್ದಾರೆ. ನಂತರ ಬಾವಿಯಿಂದ ಮೇಲಕ್ಕೆ ಬರಲು ಸಾಧ್ಯವಾಗದ ಹಿನ್ನಲೆಯನ್ನು ಇವರನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ರೂಪೇಶ್ ಬಾವಿಗೆ ಇಳಿದು ಸಿಬ್ಬಂದಿಗಳ ಸಹಾಯದಿಂದ ಭೋಜರವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಚರಣೆಯಲ್ಲಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಮೋನಿಷ್, ಚಂದ್ರಶೇಖರ್, ಕೇಶವ್, ನಿತ್ಯಾನಂದ, ಸಂಜಯ್ ಪಾಲ್ಗೊಂಡಿದ್ದರು. ಸಮಾಜಸೇವಕ ಕೆದಿಂಜೆ ಸುಪ್ರೀತ್ ಶೆಟ್ಟಿ, ಹರಿ ಆಚಾರ್ಯ ಹಾಗೂ ಸ್ಥಳೀಯರು ಸಹಕರಿಸಿದರು. ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.