logo
WhatsApp Image 2026-04-02 at 14.46.04.jpeg
hindalco everlast.jpeg

ರಸ್ತೆಬದಿ ನಿಂತಿದ್ದ ಸೂಪರ್ ವೈಸರ್ ಗೆ ಡಿಕ್ಕಿ ಹೊಡೆದ ಸಿಮೆಂಟ್ ಮಿಕ್ಸರ್ ವಾಹನ .ವ್ಯಕ್ತಿ ಮೃತ್ಯು

ಟ್ರೆಂಡಿಂಗ್
share whatsappshare facebookshare telegram
15 Feb 2024
post image

ಕಾರ್ಕಳ: ಸಿಮೆಂಟ್ ಮಿಕ್ಸರ್ ವಾಹನ ಹಿಂದಕ್ಕೆ ತೆಗೆಯುವಾಗ ವೇಳೆ ರಸ್ತೆಬದಿ ನಿಂತಿದ್ದ ಸೂಪರ್ ವೈಸರ್ ಗೆ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಪಡುಕುಡೂರು ಎಂಬಲ್ಲಿ ಫೆ.14ರಂದು ನಡೆದಿದೆ..ಭಾಷಿ ವೈ ಎಂಬುವವರು ಮೃತಪಟ್ಟ ವ್ಯಕ್ತಿ.

ಕುಂದಾಪುರ ಮೂಲದ ಗುತ್ತಿಗೆದಾರರಿಂದ ಪಡುಕುಡೂರು ಗ್ರಾಮದ ಕೊಡಮಣಿತ್ತಾಯ ದೇವಸ್ಥಾನವರೆಗಿನ ಮುಖ್ಯರಸ್ತೆಯ ಕಾಮಗಾರಿ ನಡೆಯುತ್ತಿದ್ದು ಫೆ.14ಸಂಜೆ ವೇಳೆ ಕಾಮಗಾರಿಗೆ ಬಳಸುತ್ತಿದ್ದ ನೋಂದಣಿಯಾಗದ ಹೊಸ ಸಿಮೆಂಟ್ ಮಿಕ್ಸರ್ ವಾಹನದ ಚಾಲಕನಾದ ಸಂಜು ಶರಣಪ್ಪಎಂಬಾತ ತಾನು ಚಲಾಯಿಸುತ್ತಿದ್ದ ವಾಹನವನ್ನು ಹಿಂದಕ್ಕೆ ಚಲಾಯಿಸಿದ್ದು, ಆ ವೇಳೆ ರಸ್ತೆಯಲ್ಲಿ ನಿಂತಿದ್ದ ಕಂಪನಿಯ ಸೂಪರವೈಸರ್‌ ಆದ ಭಾಷಿ ವೈ ಎನ್ನುವವರಿಗೆ ಡಿಕ್ಕಿ ಹೊಡೆದು ವಾಹನದ ಚಕ್ರ ಅವರ ಮೇಲೆ ಹರಿದು ಗಂಭೀರ ಗಾಯಗೊಂಡಿದ್ದರು.

ಕೂಡಲೇ ಗಾಯಾಳುವನ್ನು ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು ಅದಾಗಲೇ ಅವರು ಮೃತಪಟ್ಟಿದ್ದರು.ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.