



ಕಾರ್ಕಳ: ಕರಾವಳಿ ಕರ್ನಾಟಕದ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿ ಹಾಗೂ ಕಡಲು ಕೊರೆತಕ್ಕೆ ಶಾಶ್ವತ ಪರಿಹಾರ ಮತ್ತು ರುದ್ರಭೂಮಿ ಚಿತಾಗಾರಗಳ ವಿದ್ಯುದ್ದೀಕರಣದ ಬಗ್ಗೆ ಸಮಾಲೋಚನಾ ಸಭೆಯು ನ.28 ರಂದು ಶನಿವಾರ ಬೆಳಗ್ಗೆ 10. 30 ಕ್ಕೆ ಉಡುಪಿಯ ಕಿದಿಯೂರು ಹೋಟೆಲ್ ಶೇಷಶಯನ ಸಬಾಗೃಹ ದಲ್ಲಿ ನಡೆಯಲಿದೆ ಕಾರ್ಯಕ್ರಮವನ್ನು ಮೀನುಗಾರಿಕೆ ಸಚಿವ ಮಾಂಕಾಳ್ ವೈದ್ಯ ಕಾರ್ಯಕ್ರಮ ಉದ್ಥಾಟಿಸಲಿದ್ದಾರೆ ಎಂದು ಉಡುಪಿ. ದ.ಕ ಜಿಲ್ಲಾ ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ಡಿ. ಆರ್ ರಾಜು ಹೇಳಿದರು. ಅವರು ಕಾರ್ಕಳ ಕಟೀಲು ಹೋಟೆಲ್ ನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಯಕೃಷ್ಣ ಪರಿಸರ ಸಮಿತಿಯ ಅಧ್ಯಕ್ಷ ಎಲ್ ವಿ ಅಮೀನ್ ಅಧ್ಯಕ್ಷ ತೆ ವಹಿಸಲಿದ್ದು, ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀ ಪಾದ್ ನಾಯಕ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಡಾ. ಡೇವಿಡ್ ಪ್ರಾಂಕ್ ಫರ್ನಾಂಡೀಸ್, ಸಮಿತಿಯ ಗೌರವಾಧ್ಯಕ್ಷ ಡಾ. ಬಿ ಎಂ ಹೆಗ್ಡೆ, ಸಂಸ್ಥಾಪಕ ತೊನ್ಸೆ ಜಯಕೃಷ್ಣ ಎ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಉಪಸ್ಥಿತರಿರುವರು ಎಂದು ಡಿ .ಆರ್ ರಾಜು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.