



ಕಾರ್ಕಳ: ಕಂಬಳ ವು ತುಳುನಾಡಿನ ಹಿರಿಮೆಯು ಹೌದು .ತುಳುನಾಡ ಸಂಸ್ಕೃತಿಯ ಬಾಗವು ಆಗಿದೆಈ ಕಂಬಳ ಋತುವಿನಲ್ಲಿ ಕಂಬಳ ಸಮಿತಿಯು ಹೊಸತೊಂದು ಪ್ರಯೋಗಕ್ಕೆ ಮುಂದಾಗಿದೆ.
ಶನಿವಾರ ಕಂಬಳ ಸಮಿತಿಯ ವತಿಯಿಂದ ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ ನಡೆದ ಪ್ರಾಯೋಗಿಕ ಕಂಬಳ ದಲ್ಲಿ ಸ್ಪಷ್ಟ ಹಾಗೂ ನಿಖರ ನಿರ್ದಿಷ್ಟ ಮಾಹಿತಿಯನ್ನು ಪಡೆಯಲು ಎಫ್ ಎಟಿ ( ಫುಲ್ಲಿ ಅಟೊಮೊಟಿಕ್ ಟೈಮಿಂಗ್ಸ್) ಅ್ಯಪ್ ಪರಿಚಯಿಸಿದೆ. ಈ ಎಫ್ ಎ ಟಿ ಸಿಸ್ಟಮ್ ಅ್ಯಪ್ ಆಧಾರಿತ ವ್ಯವಸ್ಥೆಯಾಗಿದ್ದು ನಿಗದಿತ ಅವಧಿಯಲ್ಲಿ ಕೋಣಗಳ ಕ್ರಮಿಸುವಿಕೆ ಹಾಗೂ ವೇಗವನ್ನು ಎಲ್ಲವೂ ಸ್ಪಷ್ಟ ಚಿತ್ರಣ ಕ್ಯಾಮರಾ ಮೂಲಕ ಕ್ರೋಡೀಕರಿಸಿ ಕಾಣಬಹುದಾಗಿದೆ. ಎಲ್ಲವು ಸ್ವಯಂಚಾಲಿತ ವ್ಯವಸ್ಥೆ ಯಾಗಿದ್ದು ಪ್ರಾಯೋಗಿಕ ಹಂತದಲ್ಲಿದೆ. ಶನಿವಾರ ಕಾರ್ಕಳ ಮಿಯ್ಯಾರು ಕಂಬಲದಲ್ಲಿ ಈ ಎಫ್ ಎ ಟಿ ಸಿಸ್ಟಮ್ ಅನ್ನು ಕಂಬಳದಲ್ಲಿ ಅಳವಡಿಸಿ ಮಾಹಿತಿಯನ್ನು ಕಲೆಹಾಕುತಿದ್ದಾರೆ.

ಕಾರ್ಯಚರಣೆ ಹೇಗೆ : ಕಾರ್ಕಳ ಮೂಲದ ಐ ಎನ್ ಬಿ ಐ ಸಾಫ್ಟ್‌ವೇರ್ ಕಂಪನಿಯು ಈ ಎಫ್ ಎ ಟಿ ಸಿಸ್ಟಮ್ ಆಭಿವೃದ್ದಿ ಪಡಿಸಿದೆ. ಕಂಬಳದ ಎರಡು ಕರೆಗಳಲ್ಲಿಯು ಮಂಜೊಟ್ಟಿಯ ಕೆಳಗೆ ಹಾಗೂ ಕಂಬಳದ ಓಟ ಅರಂಭವಾಗುವ ಭಾಗದಲ್ಲಿ ಒಟ್ಟು ನಾಲ್ಕು ಆ್ಯಾಪ್ ಆಧಾರಿತ ಕ್ಯಾಮರ ಉಪಕರಣಗಳಿವೆ.
ಓಟದ ಆರಂಭಿಕ ಹಂತದಲ್ಲಿ ಹಾಗೂ ಕೊನೆಯ ಹಂತದವರೆಗು ಕಂಬಳ ಕೋಣಗಳ ಪ್ರತಿಯೊಂದು ಓಟದ ವೇಗವನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಕಂಬಳದ ಕೋಣಗಳ ವೇಗವಾಗವು ಸೆಕೆಂಡುಗಳಲ್ಲಿ ನಿಗದಿಯಾಗಿರುವ ಕಾರಣ , ವೇಗವಾಗಿ ಕ್ರಮಿಸಿದ ಮಂಜೊಟ್ಟಿ ಮುಟ್ಟಿದ ಕೋಣಗಳ ಗೆಲುವಿನ ಮಾಹಿತಿಯನ್ನು ಸೈರನ್ ಮೂಲಕ ತಿಳಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.ಕ್ಯಾಮರಾಗಳ ಮೂಲಕ ಎಲ್ಲಾ ಮಾಹಿತಿಯನ್ನು ಕ್ರೋಢೀಕರಿಸಿ ಚಿತ್ರಗಳನ್ನು ಸೆರೆಹಿಡಿದು ನಿಖರತೆ ತೋರಿಸಲು ಅನುಕೂಲ ವಾಗಲಿದೆ .
ಪ್ರಸ್ತುತ ವಿರುವ ಕಂಬಳ ದ ಲೇಸರ್ ಬೀಮ್ ವ್ಯವಸ್ಥೆಯನ್ನು ಸಾಯಿ( ಸ್ಫೋರ್ಟ್ಸ್ ಅಕಾಡೆಮಿ ಅಫ್ ಇಂಡಿಯಾ) ಮಾನ್ಯತೆ ಪಡೆದಿದೆ.
ಲೇಸರ್ ಬೀಮ್ ಗಿಂತ ಎಪ್ ಎ ಟಿ ಸಿಸ್ಟಮ್ ಭಿನ್ನ: ಲೇಸರ್ ಬೀಮ್ ವ್ಯವಸ್ಥೆ ಯಲ್ಲಿ ರಾತ್ರಿ ಯ ವೇಳೆ ಅಳವಡಿಸುವ ಉಪಕರಣಗಳಿಗೆ ಕೀಟಗಳ ಹಾವಳಿ ಹೆಚ್ಚಿರುವ ಕಾರಣ ಫಲಿತಾಂಶ ನೀಡಲು ಸಮಯ ತೆಗೆದುಕೊಳ್ಲುತಿತ್ತು. ಆದರೆ ಈ ಬಾರಿಯ ಏಫ್ ಎ ಟಿ ಸಿಸ್ಟಮ್ ನಲ್ಲಿ ಯಾವುದೆ ತೊಂದರೆಗಳಿಲ್ಲ . ಎಲ್ಲವು ಚಿತ್ರಗಳ ಮೂಲಕ ದಾಖಲಾಗುತ್ತವೆ.ಸಮಯ ಉಳಿತಾಯ ವಾಗಲಿದೆ.
ಕಳೆದ ಐದು ವರ್ಷಗಳಿಂದ ಕಂಬಳವು ಲೇಸರ್ ಫಿನಿಷಿಂಗ್ ಸಿಸ್ಟಮ್ ಮೂಲಕ ಕಾರ್ಯಾಚರಿಸುತಿತ್ತು. ಈ ಬಾರಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಂತ್ರಜ್ಞಾನ ಆಧುನೀಕರಿಸಿ ಏಫ್ ಎ ಟಿ ಸಿಸ್ಟಮ್ ಅಳವಡಿಸಲಾಗುತ್ತಿದೆ.
ಕುದುರೆ ರೆಸ್ ಸ್ಪರ್ಧೆ ಯನ್ನು ಅದ್ಯಯನ ಮಾಡಿ ಈ ಈ ಎಫ್ ಎ ಟಿ ಸಿಸ್ಟಮ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಈಗ ಪ್ರಾಯೋಗಿಕ ಹಂತದಲ್ಲಿದೆ. ಇನ್ನೂ ಒಂದು ತಿಂಗಳೊಳಗೆ ಈ ಹೊಸ ವ್ಯವಸ್ಥೆ ಅಭಿವೃದ್ಧಿ ಪಡಿಸಿ ಕಂಬಳದಲ್ಲಿ ಅಳವಡಿಸುವ ಯೋಜನೆ ಹಾಕಲಾಗಿದೆ. ನಿಖರತೆ ಜೊತೆ ಸಮಯದ ಉಳಿತಾಯವಾಗಲಿದೆ. ಕಂಬಳ ಸಮಿತಿಯ ಸಲಹೆಯನ್ನು ಪರಿಗಣಿಸಿ ಆಧುನಿಕರಿಸಲಾಗುತ್ತಿದೆ.
ರತ್ನಾಕರ್ ನಾಯ್ಕ್ ಐ ಎನ್ ಬಿ ಐ ಮುಖ್ಯಸ್ಥ
ಲೇಸರ್ ಬೀಮ್ ಗಿಂತಲೂ ಹೆಚ್ಚಿನ ಸ್ಪಷ್ಠತೆ ನಿಖರತೆ ಈ ಹೊಸ ತಂತ್ರಜ್ಞಾನ ದಲ್ಲಿದೆ.ಈ ಬಾರಿ ನಡೆಯುವ ನಾಲ್ಕು ಕಂಬಳ ದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಲಿವೆ.
ಗುಣಪಾಲ ಕಡಂಬ , ಕಂಬಳ ಸಮಿತಿಯ ಕಾರ್ಯಾಧ್ಯಕ್ಷರು , ಸಂಚಾಲರು ಕಂಬಳ ಅಕಾಡೆಮಿ
ಕಂಬಳದ ಫಲಿತಾಂಶ ನಿಖರತೆಯನ್ನು ಉನ್ನತೀಕರಿಸುವ ಕೆಲಸ ವಾಗುತ್ತಿದೆ ಅಧುನಿಕರಿಸುವ ಕಾರ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಿತಿ ಸದಸ್ಯರ ಜೊತೆ ಚರ್ಚಿಸಿ ಸಾಧಕ ಭಾದಕಗಳನ್ನು ಗಮನಹರಿಸುವ ಕಾರ್ಯವಾಗಲಿದೆ. ಬಳಿಕ ಕಂಬಳದಲ್ಲಿ ಅಳವಡಿಸಲಾಗುತ್ತದೆ
ದೇವಿಪ್ರಸಾದ್ ಶೆಟ್ಟಿ ಬೆಳಪು ಕಂಬಳ ಸಮಿತಿಯ ಅದ್ಯಕ್ಷ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.