



ಕಾರ್ಕಳ : ವಿಕಲಚೇತನ ಮಗನನ್ನು ಬಾವಿಗೆ ತಳ್ಳಿದ ತಂದೆ ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಕಾರ್ಕಳ ತಾಲೂಕಿನ ಕೆರ್ವಾಶೆಯ ಗ್ರಾಮದಲ್ಲಿ ಇಂದು ನಡೆದಿದೆ. ಪಾಚರಬೆಟ್ಟು ಕೃಷ್ಣ ಪೂಜಾರಿ ಎಂಬವರು ತನ್ನ ವಿಕಲಚೇತನ ಪುತ್ರ 26ವರ್ಷದ ದಿಪೇಶ್ ಎಂಬಾತನನ್ನು ಮನೆ ಸಮೀಪದ ಬಾವಿಗೆ ತಳ್ಳಿದ್ದಾರೆ. ಬಳಿಕ ತಾನೂ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೃಷ್ಣ ಪೂಜಾರಿ ಅವರ ಪತ್ನಿ ಅನಾರೋಗ್ಯಕ್ಕೀಡಾಗಿದ್ದು, ಇದ್ದ ಓರ್ವ ಮಗನೂ ವಿಕಲಚೇತನ ಎಂದು ಮನನೊಂದ ಕೃಷ್ಣ ಪೂಜಾರಿ ಶನಿವಾರ ಈ ಕೃತ್ಯವೆಸಗಿದ್ದಾರೆ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಉಡುಪಿ ಎಸ್‌ಪಿ ವಿಷ್ಣುವರ್ಧನ್, ಕಾರ್ಕಳ ಡಿವೈಎಸ್‌ಪಿ ವಿಜಯ ಪ್ರಸಾದ್, ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಅಜೆಕಾರು ಎಸ್ ಐ ಶುಭಕರ್, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.