logo
WhatsApp Image 2026-10-07 at 11.10.42 PM - Copy.jpeg
WhatsApp Image 2026-04-02 at 14.46.04.jpeg

ಹೆರ್ಮುಂಡೆ ಶಾಲೆಯಲ್ಲಿ ಗೌರವಾಭಿನಂದನಾ ಕಾರ್ಯಕ್ರಮ

ಟ್ರೆಂಡಿಂಗ್
share whatsappshare facebookshare telegram
31 Oct 2026
post image

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆರ್ಮುಂಡೆ ಇಲ್ಲಿನ ಶಾಲಾಭಿವೃದ್ಧಿ ಮತ್ತು ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ 2026-27ನೇ ಶೈಕ್ಷಣಿಕ ವರ್ಷದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಾಲೆಯ ಮುಖ್ಯ ಶಿಕ್ಷಕ ಶ್ರೀಕಾಂತ್ ಭಟ್ ಹಾಗೂ ಉಡುಪಿ ಜಿಲ್ಲಾ GPT ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ ಇವರಿಗೆ ಅಭಿನಂದನಾ ಸಮಾರಂಭ ನಡೆಯಿತು

ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷರಾದ ಉದಯ್ ಕುಮಾರ್ ನಾಯಕ್ ಕಲಾಯಿಗುತ್ತು ಅಧ್ಯಕ್ಷತೆ ವಹಿಸಿದ್ದು ಪ್ರಮುಖ ಅಭ್ಯಾಗತರಾಗಿ ನಿವೃತ್ತ ಮುಖ್ಯ ಶಿಕ್ಷಕರು ಹೆರ್ಮುಂಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಚ್. ಅನಂದ ಹೆಗ್ಡೆ, ಅಂಕಿತಾ ನಾಯಕ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮರ್ಣೆ ಗ್ರಾಮ ಪಂಚಾಯತ್, ಈರಣ್ಣ ಕೆ ಠಾಣಾಧಿಕಾರಿಗಳು ಅಜೆಕಾರು, ನಿಶ್ಮಿತಾ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಅಜೆಕಾರು ವಲಯ, ಪ್ರಗತಿಪರ ಕೃಷಿಕರು ಮತ್ತು ದಾನಿಗಳಾದ ವಿವೇಕಾನಂದ ಭಟ್ ಮತ್ತು ಮಾತಚ್ಚನ್ ಉಪಸ್ಥಿತರಿದ್ದು ಶುಭಾಶಯ ತಿಳಿಸಿದರು. ಕಾರ್ಕಳ ರೋಟರಿ ರಾಕ್ ಸಿಟಿಯ ಅಧ್ಯಕ್ಷರಾದ ಮಂಜುನಾಥ ಹೆಗ್ಡೆ ಮತ್ತು ಅಜೆಕಾರು ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಶ್ರೀ ಅನೀಶ್ ಇವರನ್ನು ಗುರುತಿಸಿ ಪ್ರಶಂಸಿಸಲಾಯಿತು. ಜ್ಯೋತಿ ಉದಯ್ ನಾಯಕ್ ಕಲಾಯಿಗುತ್ತು ಪ್ರಾರ್ಥಿಸಿದರು, ಅರ್ಚಕರಾ ರಾಘವೇಂದ್ರ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಶಿಕ್ಷಕಿ ಅಶ್ವಿನಿ ಸ್ವಾಗತಿಸಿದರು, ಮೋನಿಕಾ ಮತ್ತು ಲತಾ ಹೆಗ್ಡೆ ಅಭಿನಂದನ ಪತ್ರ ವಾಚಿಸಿದರು, ಉದಯ ಕುಲಾಲ್ ಧನ್ಯವಾದ ಸಮರ್ಪಿಸಿದರು, ಅಜಿತ್ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಆಚಾರ್ಯ ಮತ್ತು ಎಲ್ಲಾ ಸದಸ್ಯರು, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಜನ್ ನಾಯಕ್ ಮತ್ತು ಎಲ್ಲಾ ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕಿ ಶ್ರುತಿ ಕಾರ್ಯಕ್ರಮ ಸಂಘಟಿಸಿ ಸಹಕರಿಸಿದರು

WhatsApp Image 2026-10-20 at 7.47.33 PM.jpeg
WhatsApp Image 2026-10-20 at 7.47.33 PM (1) - Copy.jpeg
WhatsApp Image 2026-10-20 at 6.05.03 PM.jpeg
WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.