



ಉತ್ತರ ಕನ್ನಡ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಸಂದರ್ಭ ಓರ್ವ ಮೀನುಗಾರರು ಬೋಟಿನಿಂದ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಉತ್ತರ ಕನ್ನಡದ ಕುಮಟ ತಾಲೂಕಿನ ಹೊಸಕೇರಿಯ ಸುಬ್ರಹ್ಮಣ್ಯ ಜಟ್ಟಿ ಅಂಬಿಗ (37) ಮೃತಪಟ್ಟ ದುರ್ದೈವಿ.
ಈತ ಕಳೆದ 10 ವರ್ಷಕ್ಕೂ ಅಧಿಕ ವರ್ಷಗಳ ಕಾಲ ಮೀನುಗಾರಿಕೆ ಮಾಡಿಕೊಂಡಿದ್ದರು. ಬಾಲಕೃಷ್ಣ ಎಂಬವರ ಶ್ರೀ ಶಿವಪಾವನಿ ಬೋಟಿನಲ್ಲಿ ದುಡಿಯುತ್ತಿದ್ದ ಅವರು ಭಾನುವಾರ, ಅಂದರೆ ಆಗಸ್ಟ್ 11 ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆ ನಡೆಸಲು ತೆರಳಿದ್ದರು.
ನಂತರ ಆಗಸ್ಟ್ 13 ರಂದು ಮಧ್ಯಾಹ್ನ ಸಮುದ್ರದಲ್ಲಿ ಬಲೆ ಎಳೆಯುತ್ತಿರುವಾಗ ಅಲೆಯ ಅಬ್ಬರಕ್ಕೆ ಉಂಟಾದ ಬೋಟಿನ ಓಲಾಟಕ್ಕೆ ಸುಬ್ರಹ್ಮಣ್ಯ ಅವರು ಆಯತಪ್ಪಿ ನೀರಿಗೆ ಬಿದ್ದು ಬಿಟ್ಟಿದ್ದರು. ಹಾಗೆ ಬಿದ್ದವರನ್ನು ಮೇಲಕ್ಕೆ ಎತ್ತಲು ಆಗಿರಲಿಲ್ಲ. ಹಾಗಾಗಿ ಅವರು ಮುಳುಗಡೆಗೊಂಡು ಮೃತರಾಗಿದ್ದಾರೆ. ತದನಂತರ ಅಂದೇ ಸುಮಾರು 4 ಗಂಟೆಯ ವೇಳೆಗೆ ಅವರ ಮೃತದೇಹವು ಪತ್ತೆಯಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.