



ಝೊಮ್ಯಾಟೊ ಈ ವರ್ಷ ತನಗೆ ಎಷ್ಟಲ್ಲಾ ಆರ್ಡರ್ ಗಳು ಬಂದಿದೆ ಎನ್ನುವ ಸಮಗ್ರ ಮಾಹಿತಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವರ್ಷ ಪ್ರತಿ ಸೆಕೆಂಡಿಗೆ 3 ಕ್ಕೂ ಹೆಚ್ಚು ಬಿರಿಯಾನಿ ಆರ್ಡರ್‌ಗಳು ಬಂದಿದ್ದು, ಒಟ್ಟು 9 ಕೋಟಿಗೂ ಹೆಚ್ಚು ಬಿರಿಯಾನಿಯನ್ನು ಗ್ರಾಹಕರು ನಮ್ಮಲ್ಲಿ ಆರ್ಡರ್ ಮಾಡಿದ್ದಾರೆ ಜೊತೆಗೆ ಡೈನಿಂಗ್ ಔಟ್ ವಿಭಾಗದಲ್ಲಿ ರೆಸ್ಟೋರೆಂಟ್ ಒಂದಕ್ಕೆ ಭೇಟಿ ನೀಡಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು ಒಂದು ಹೊತ್ತಿನ ಊಟಕ್ಕೆ ಬರೋಬ್ಬರಿ 5 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ಝೊಮ್ಯಾಟೊ ಹೇಳೀಕೊಂಡಿದೆ.
ಇನ್ನೊಂದು ವಿಶೇಷ ಸಂಗತಿ ಅಂದ್ರೆ ಡೈನಿಂಗ್ ಔಟ್ ವಿಭಾಗದಲ್ಲಿ ಈ ವರ್ಷ ಝೊಮ್ಯಾಟೊ ಮೂಲಕ ರೆಸ್ಟೋರೆಂಟ್‌ಗಳಲ್ಲಿ ಒಂದು ಕೋಟಿಗೂ ಹೆಚ್ಚು ಟೇಬಲ್‌ಗಳನ್ನು ಮುಂಗಡ ಬುಕ್ ಮಾಡಲಾಗಿತ್ತು ಎಂದು ಝೊಮ್ಯಾಟೊ ವರದಿ ತಿಳಿಸಿದೆ. ಇದರಲ್ಲಿ, 84,866 ಜನರು ಫಾದರ್ಸ್ ಡೇ ದಿನದಂದು ತಮ್ಮ ತಂದೆಯನ್ನು ಲಂಚ್ ಅಥವಾ ಡಿನ್ನರ್‌ಗೆ ಕರೆದುಕೊಂಡು ಹೋಗಲು ಮುಂಗಡ ಟೇಬಲ್ ಬುಕ್ ಮಾಡಿದ್ದಾರೆ . ಇನ್ನೂ ರೆಸ್ಟೋರೆಂಟ್ ಒಂದಕ್ಕೆ ಭೇಟಿ ನೀಡಿದ್ದ ಬೆಂಗಳೂರಿನ ಆಹಾರ ಪ್ರೇಮಿಯೊಬ್ಬರು ಒಂದೇ ಬಾರಿಗೆ 5 ಲಕ್ಷ ರೂ ಬಿಲ್ ಪಾವತಿಸಿದ್ದಾರೆ. ಝೊಮ್ಯಾಟೊ ಪ್ರಕಾರ ಆ ವ್ಯಕ್ತಿ ಒಂದು ಹೊತ್ತಿನ ಊಟಕ್ಕೆ ನಿಖರವಾಗಿ 5.13 ರೂ. ಖರ್ಚು ಮಾಡಿದ್ದಾರೆ. ಒಂದೇ ಬಾರಿಗೆ ಇಷ್ಟು ದುಬಾರಿ ಬಿಲ್ ಪಾವತಿಸಿದ್ದು ನಮ್ಮಲ್ಲಿ ಇದೇ ಮೊದಲು ಎಂದು ಝೊಮ್ಯಾಟೊ ಹೇಳಿದೆ. ಒಂದು ಹೊತ್ತಿನ ಊಟಕ್ಕಾಗಿ ಇಷ್ಟು ಹಣ ವ್ಯಯಿಸುವವರು ಇದ್ದಾರೆ ಎಂದು ಜನ ಸೋಜಿಗಗೊಂಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.