



ಹೆಬ್ರಿ : ಇಲ್ಲಿನ ಅಮೃತ ಭಾರತಿ ಮಾತೃ ಮಂಡಳಿ ವತಿಯಿಂದ ಮಾತೆಯರಿಗೆ ಹಾಗೂ ಸಾರ್ವಜನಿಕರಿಗೆ ನೀಡಿದ ಗೋಗ್ರಾಸ ನಿಧಿ ಹುಂಡಿಯಲ್ಲಿ ಸಂಗ್ರಹವಾದ ಸುಮಾರು 38,500 ರೂಪಾಯಿ ಮೊತ್ತವನ್ನು ಕಾರ್ತಿಕ ಮಾಸದ ಈ ಸುಸಂದರ್ಭದಲ್ಲಿ ಹೆಬ್ರಿ ಗಿಲ್ಲಾಳಿ ಶ್ರೀ ವಿಶ್ವೇಶ ಕೃಷ್ಣ ಗೋಶಾಲೆಯ ಪ್ರಮುಖರಾದ ವಿದ್ವಾನ್ ಪದ್ಮನಾಭ ಆಚಾರ್ ಅವರಿಗೆ ನೀಡಲಾಯಿತು. ಮಾತೃಮಂಡಳಿ ಅಧ್ಯಕ್ಷೆ ವೀಣಾ ಆರ್ ಭಟ್, ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್, ಶಿಕ್ಷಕಿ ವಿಮಲಾ ಭಂಡಾರಿ, ಮಾತೆಯರಾದ ನಂದಿತಾ ಕಾಮತ್, ಗಗನ, ಶೃತಿ, ಶೋಭಾ ನಾಯಕ್, ಆಶಾಲತಾ, ಸುಧಾ ಭಟ್, ಅಶ್ವಿನಿ, ಲಲಿತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.