

ಕಾರ್ಕಳ: ದಿ. ಎಂ.ಜೆ.ಎಫ್. ಲಯನ್ ಚಂದ್ರಹಾಸ ಸುವರ್ಣ ಅವರ ಸ್ಮರಣಾರ್ಥ ಅ.3ರಂದು ಕಾರ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ, ಉಚಿತ ಆರೋಗ್ಯ, ಕಣ್ಣಿನ ಹಾಗೂ ದಂತ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಲಯನ್ಸ್ ಕ್ಲಬ್ ಕಾರ್ಕಳ, ಎಕ್ಸಲೆನ್ಸ್ ಪ್ರೊಫೆಷನಲ್ ಡಿಗ್ರಿ ಕಾಲೇಜು ಕಾರ್ಕಳ, ರಕ್ತನಿಧಿ ಘಟಕ ಜಿಲ್ಲಾ ಆಸ್ಪತ್ರೆ ಉಡುಪಿ, ನಿಟ್ಟೆ ಗಾಜ್ರಿಯಾ ಆಸ್ಪತ್ರೆ ಕಾರ್ಕಳ ಹಾಗೂ ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಶಿಬಿರ ನಡೆಯಲಿದೆ.
ಬಿಲ್ಲವ ಸಂಘ ಕಾರ್ಕಳ, ಮಹಾಲಿಂಗೇಶ್ವರ ಯುವಕ ಮಂಡಲ, ಮಹಿಳಾ ಮಂಡಲ ಪೆರ್ವಾಜೆ, ಯುವವಾಹಿನಿ ಕಾರ್ಕಳ ಘಟಕ, ಗುಡ್ಡೆಯಂಗಡಿ ಫ್ರೆಂಡ್ಸ್, ಎಸ್‌ಸಿಐ ಕಾರ್ಕಳ ರಾಕ್ ಸಿಟಿ, ಕ್ಯಾಥೋಲಿಕ್ ಸಭಾ ಕಾರ್ಕಳ ಟೌನ್, ಐಸಿವೈಎಂ ಕಾರ್ಕಳ ಟೌನ್, ಜಸ್ಟಿಸ್ ಆ್ಯಂಡ್ ಪೀಸ್ ಕಮಿಷನ್, ಹೆಲ್ತ್ ಕಮಿಷನ್ ಕ್ರೈಸ್ಟ್ ಕಿಂಗ್ ಚರ್ಚ್ ಕಾರ್ಕಳ, ಫ್ರೆಂಡ್ಸ್ ಪವರ್ ಜಿಮ್ ಜೋಡುರಸ್ತೆ, ಸೇವಾಧರ್ಮ ಸಂಸ್ಥೆ, ಕಾರ್ಕಳ ಸ್ಪೋರ್ಟ್ಸ್ ಕ್ಲಬ್ ಹಾಗೂ ಇಂಜಿನಿಯರ್ಸ್ ಅಸೋಸಿಯೇಷನ್ ಕಾರ್ಕಳ ಸಹಭಾಗಿತ್ವ ನೀಡಿವೆ.
ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಮಂಗಳೂರು ಇವರ ನೇತೃತ್ವದಲ್ಲಿ ಉಚಿತ ದಂತ ತಪಾಸಣಾ ಶಿಬಿರವೂ ನಡೆಯಲಿದೆ.
ಶಿಬಿರವು ಅ.3ರಂದು ಶನಿವಾರ ಬೆಳಗ್ಗೆ 9.30ರಿಂದ ಸಂಜೆ 3.30ರವರೆಗೆ ಗಾಂಧಿ ಮೈದಾನ ಸಮೀಪದ ಕ್ರೈಸ್ಟ್ ಕಿಂಗ್ ಚರ್ಚ್ ಕ್ಯಾಂಪಸ್‌ನ ಎಕ್ಸಲೆನ್ಸ್ ಪ್ರೊಫೆಷನಲ್ ಡಿಗ್ರಿ ಕಾಲೇಜಿನಲ್ಲಿ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.