



ಉಡುಪಿ: ಮಲ್ಪೆಯ ಮೀನಿಗಾರರ ಬಲೆಗೆ ಬೃಹತ್ ಗಾತ್ರದ ಮೀನೊಂದು ಬಿದ್ದಿದ್ದು, ಬರೋಬ್ಬರಿ 400 ಕೆ ಜಿ ತೂಕ ಹೊಂದಿದೆ. ಮಲ್ಪೆಯ ಬಲರಾಂ ಪರ್ಸೀನ್ ಬೋಟಿನವರಿಗೆ ಈ ಮೀನು ದೊರೆತಿದೆ. ಈ ಮೀನಿನ ಸಾಮಾನ್ಯ ಹೆಸರು ಬಿಲ್‌ಫಿಶ್ ಆಗಿದ್ದು, ಇದನ್ನು ಸ್ಥಳೀಯವಾಗಿ ಮಡಲು ಮೀನು ಅಥವಾ ಕಟ್ಟೆಕೊಂಬು ಮೀನು ಎಂಬುದಾಗಿ ಕರೆಯಲಾಗುತ್ತದೆ.
ಇದು ಗಿಲ್ ನೆಟ್‌ನಲ್ಲಿ ಸಣ್ಣ ಗಾತ್ರದಲ್ಲಿ ಸಾಮಾನ್ಯವಾಗಿ ಸಿಗುತ್ತಿರುತ್ತದೆ. ಈ ರೀತಿ ದೊಡ್ಡ ಗಾತ್ರದಲ್ಲಿ ಈ ಮೀನು ದೊರೆಯುವುದು ಅಪರೂಪವಾಗಿದೆ ಎನ್ನಲಾಗಿದೆ. ಸಣ್ಣ ಮಡಲು ಮೀನಿಗೆ ಇರುವಷ್ಟು ಬೆಲೆ ದೊಡ್ಡ ಮೀನಿಗೆ ಇರುವುದಿಲ್ಲ ಎಂದು ಮಲ್ಪೆ ಕನ್ನಿ ಮೀನುಗಾರ ಸಂಘದ ಅಧ್ಯಕ್ಷ ದಯಕರ ವಿ.ಸುವರ್ಣ ಮಾಹಿತಿ ನೀಡಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.