



ಉಳ್ಳಾಲ: ನಗರದ ಪೊಲೀಸ್ ಠಾಣೆಯ ಹಿಂಬದಿಯಲ್ಲಿರುವ ಕ್ವಾಟ್ರಸ್ ಪರಿಸರದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಇದೊಂದು ಸಮಸ್ಯೆಯಾಗಿ ಕಂಡು ಬಂದಿದೆ. ಏಕೆಂದರೆ ಕಳೆದ ವಾರ ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್, ಲೇಡಿ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರ ಪತಿಗೆ ಹುಚ್ಚು ನಾಯಿ ಕಚ್ಚಿದ ಪ್ರಕರಣ ನಡೆದಿದೆ.
ಉಳ್ಳಾಲ ಪೊಲೀಸ್ ಠಾಣೆಯ ಪಿಸಿಗಳಾದ ಸತೀಶ್, ನವೀನ್ ಮತ್ತು ಲೇಡಿ ಪಿಸಿ ಭಾಗ್ಯಶ್ರೀ ಅವರ ಪತಿ ರಂಗನಾಥ್ ಎಂಬವರಿಗೆ ನಾಯಿ ಕಡಿದೆ.
ಪೊಲೀಸರು ಈ ನಾಯಿಗಳು ಹುಚ್ಚು ನಾಯಿ ರೀತಿ ಇದೆ. ತೆಗೆದುಕೊಂಡು ಹೋಗಿ ಎಂದು ಅನಿಮಲ್ ಕೇರ್‌ನವರಿಗೆ ತಿಳಿಸಿದ್ದರು. ವೀಡಿಯೋ ಮಾಡಿ ಇದನ್ನು ಕಳಿಸಿ ಎಂದು ಅನಿಮಲ್ ಕೇರ್ ನವರು ಪೊಲೀಸರಿಗೆ ತಿಳಿಸಿದ್ದು, ಅದರಂತೆ ವೀಡಿಯೋ ನೋಡಿದ ಅನಿಮಲ್ ಕೇರ್‌ನವರು ನಾಯಿಗೆ ಹುಚ್ಚು ಹಿಡಿದಿಲ್ಲ ಎಂದು ಹೇಳಿದ್ದರಂತೆ. ಆದರೂ ಇಲ್ಲಿ ನಾಯಿ ಉಪಟಳ ಜಾಸ್ತಿ ಇದೆ ತೆಗೆದುಕೊಂಡು ಹೋಗಿ ಎಂದು ಒತ್ತಾಯಿಸಿದ್ದಕ್ಕೆ ಕೊನೆಗೆ ಅನಿಮಲ್ ಕೇರ್‌ನವರು ಪೊಲೀಸರನ್ನು ಕಡಿದಿದ್ದ ನಾಯಿಯನ್ನು ಕೊಂಡು ಹೋಗಿದ್ದಾರೆ. ಆದರೆ ಅದು ಹಠಾತ್ ಶುಶ್ರೂಷೆ ಕೇಂದ್ರದಲ್ಲಿ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಮಾಧ್ಯಮವೊಂದರಲ್ಲಿ ಪ್ರಕಟವಾಗಿದೆ.
ಹಾಗಾಗಿ ನಾಯಿ ಕಡಿತಕ್ಕೊಳಗಾದ ಪೊಲೀಸರು ಹುಚ್ಚು ನಿರೋಧಕ ಲಸಿಕೆ ಪಡೆದಿದ್ದಾರೆ. ವಸತಿಗೃಹದಲ್ಲಿ ಅನೇಕ ನಾಯಿಗಳಿಗೂ ಈ ರೋಗ ಇರಬಹುದೇನೋ ಎನ್ನುವ ಭೀತಿ ಇದ್ದು, ಅನಿಮಲ್‌ಕೇರ್ ಸಂಸ್ಥೆಗೆ ಪೊಲೀಸರು ಮನವಿ ಮಾಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.