



ಕಾರ್ಕಳ : ಸುರತ್ಕಲ್ ತಾತ್ಕಾಲಿಕ ಟೋಲ್ ಗೇಟ್ ತೆರವುಗೊಳಿಸುವ ಭರವಸೆಯನ್ನು ಈಡೇರಿಸಬೇಕು ಎಂಬ ಹೋರಾಟ ತೀವ್ರಗೊಳ್ಳುತ್ತಿದೆ. ಆ ಪ್ರಯುಕ ದ.ಕ ಮತ್ತು ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಸಹಕಾರದಲ್ಲಿ ಟೋಲ್ ಗೇಟ್ ವಿರೋದಿ ಹೋರಾಟ ಸಮಿತಿಯು ಮಾರ್ಚ್ ೧೫, ೨೦೨೨ ರಂದು ಹೆಜಮಾಡಿ ಟೋಲ್ ಕೇಂದ್ರದಿAದ ಸುರತ್ಕಲ್ ಟೋಲ್ ಕೇಂದ್ರದ ವರಗೆ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಕಾರ್ಕಳದ ಜನತೆಯೂ ಈ ಟೋಲ್ ಕೇಂದ್ರದಿAದ ಅನೇಕ ಸಮಸ್ಯೆಯನ್ನು ಎದುರಿಸುತ್ತಿದ್ದು ಇದರಿಂದ ಮುಕ್ತಿ ಪಡೆಯಬೇಕಾದರೆ ಈ ಪಾದಯಾತ್ರೆಯ ಯಶಸ್ಸಿಗೆ ಕೈ ಜೋಡಿಸುವುದು ಅನಿವಾರ್ಯವಾಗಿದೆ. ಆ ನಿಟ್ಟಿನಲ್ಲಿ ಕಾರ್ಕಳದ ಸಮಾನ ಮನಸ್ಕ ಸಂಘಟನೆಗಳ ಸಮಾಲೋಚನೆ ಸಭೆಯನ್ನು ಮಾ.೬: ಸಾಯಂಕಾಲ ೫ ಘಂಟೆಗೆ ಕಾರ್ಕಳ ಪ್ರಕಾಶ್ ಹೋಟೇಲ್ ಸಭಾಂಗಣದಲ್ಲಿ ಕರೆಯಲಾಗಿದೆ.ಹೋರಾಟ ಸಮಿತಿಯ ಪರವಾಗಿ ಶುಭದ ರಾವ್ ಪುರಸಭಾ ಸದಸ್ಯರು ಕಾರ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.