



ಉಡುಪಿ: ನಗರದ ಹೃದಯ ಭಾಗದಲ್ಲಿರುವ ಮಾಂಡವಿ ಏಕ್ರೋಪೊಲಿಸ್ ನ ನಿವಾಸಿಗಳೆಲ್ಲರೂ ಸೇರಿ ನಡೆಸಿದಂತಹ "ಕೆಸರ್ಡ ಒಂಜಿ ದಿನ" ಕಾರ್ಯಕ್ರಮವೂ ಬೈಲೂರು ಮಹಿಷಿ ಮರ್ದಿನಿ ಶಾಲೆಯ ಬಳಿ ಇರುವ ಗದ್ದೆಯಲ್ಲಿ ಜುಲೈ 24 ರರಂದು ನಡೆಯಿತು
ಈ ಕಾರ್ಯಕ್ರಮವನ್ನು ಮಾಂಡವಿ ಬಿಲ್ಡರ್ಸ್ ನ ಪ್ರಮುಖರಾದ ಜೆರ್ರಿ ವಿನ್ಸೆಂಟ್ ಡಯಾಸ್ ಅವರು ತೆಂಗಿನ ಗರಿಯ ಹೂವನ್ನು ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಾಗೂ ಮಾಂಡವಿ ಏಕ್ರೋಪೊಲಿಸ್ ನ ಸೊಸೈಟಿ ಅಧ್ಯಕ್ಷರಾದ ಸುಕುಮಾರ್ ಶೆಟ್ಟಿ ಅವರು ಕೆಸರಿನ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ಲೆಂಡ್ ಡಯಾಸ್, ರಾಘವ ನಾಯಕ್ ಸ್ಥಳದ ಮಾಲೀಕರಾದ ರಂಗನಾಥ್ ಹಾಗೂ ವೆಂಕಟೇಶ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜನೆ ಹಾಗೂ ಪ್ರಾರ್ಥನೆಯನ್ನು ಸೊಸೈಟಿಯ ಉಪಾಧ್ಯಕ್ಷರಾದ, ಸತೀಶ್ ಹೆಗ್ಡೆ ಯವರು 'ವಂದೇ ಮಾತರಂ' ಎಂಬ ಹಾಡನ್ನು ಹಾಡುವ ಮೂಲಕ ಸಂಯೋಜಿಸಿದರು.
ಕಾರ್ಯಕ್ರಮದ ಆಟೋಟ ಸ್ಪರ್ಧೆಯನ್ನು ಮತ್ತು ವೇದಿಕೆಯ ಅಲಂಕಾರವನ್ನು ದಿವಾ ನಂಬಿಯಾರ್, ಅಮೀತ್ ಪಡುಕೋಣೆ ನಿರ್ವಹಿಸಿದರು.
ಕಟ್ಟಡದ ನಿವಾಸಿಗಳಾದ ಲಾನ್ಸಿ ಡಯಾಸ್, ನವೀನ್ ಶೇಟ್, ಫೈಯಲ್, ಮುಸ್ತಾಫ ಗುಂಡ್ಮಿ, ಪ್ರತಾಪ್, ವಕೀಲರಾದ ಇಕ್ಬಾಲ್, ಉಮಾ ಸುವರ್ಣ, ಡಾ|ಶರತ್, ಸಂಪತ್ ಶೆಟ್ಟಿ, ದರ್ಶಿತ್ ಶೆಟ್ಟಿ, ಹಾಗೂ ಮಾಂಡವಿ ಏಕ್ರೋಪೊಲಿಸ್ ನ ಎಲ್ಲಾ ನಿವಾಸಿಗಳು ಭಾಗವಹಿಸಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.