



ಅನಿಶ್ಚಿತ ಆರ್ಥಿಕತೆಯ ಕಾರಣದಿಂದಾಗಿ ಜಾಗತಿಕ ಉದ್ಯೋಗ ಕಡಿತಗಳು ಮುಂದುವರೆದಿವೆ. ಇದರಿಂದ ಜನರು ಚಿಂತೆ ಮಾಡುವಂತೆ ಆಗಿದೆ.
ಮೆಟಾ, ಅಮೆಜಾನ್, ಗೂಗಲ್ ಸೇರಿದಂತೆ ಇನ್ನೂ 570 ಟೆಕ್ ಕಂಪನಿಗಳು 2023 ರಲ್ಲಿ 1,68,918 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದೆ.
ಅಮೆರಿಕ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಹಲವಾರು ಮಂದಿಯನ್ನು ಈಗಾಗಲೇ ತೆಗೆದುಹಾಕಲಾಗಿದೆ. ಆದರೆ, ದೈತ್ಯ ಕಂಪನಿಗಳು ಯುರೋಪಿನಲ್ಲಿನ ಜನರನ್ನು ಹೊರಹಾಕಲು ಸಾಧ್ಯವಾಗದೇ ಹೊಸ ಮಾರ್ಗವನ್ನು ಹುಡುಕುತ್ತಿದೆ.
ಯುರೋಪಿನಲ್ಲಿ ಕಾರ್ಮಿಕ ನಿಯಮಗಳು ಬಹಳ ವಿಭಿನ್ನವಾಗಿ ಮತ್ತು ಬಿಗಿಯಾಗಿದೆ. ಉದ್ಯೋಗಿ ಹಿತಾಸಕ್ತಿ ಗುಂಪುಗಳೊಂದಿಗೆ ಪೂರ್ವ ಸಮಾಲೋಚನೆಯಿಲ್ಲದೆ ಕೆಲ ಯುರೋಪಿಯನ್ ದೇಶಗಳಲ್ಲಿ ವಜಾ ಮಾಡುವಂತೆಯೂ ಇಲ್ಲ. ಕಾನೂನಿನ ಪ್ರಕಾರ ಕಂಪನಿಗಳು ವಜಾಗೊಳಿಸುವ ಮೊದಲು ಈ ಕೌನ್ಸಿಲ್‌ಗಳೊಂದಿಗೆ ಸಮಾಲೋಚಿಸಲು ಕಾನೂನುಬದ್ಧ ನಿಯಮವಿದ್ದು ಕಂಪನಿಗಳು ಇದಕ್ಕೆ ಬದ್ಧವಾಗಿರಬೇಕಾಗುತ್ತದೆ.
ಈ ಕಾರಣದಿಂದ ತಮ್ಮ ಹೊಸ ಉಪಾಯವನ್ನು ಇಲ್ಲಿ ಉಪಯೋಗಿಸಲು ಕಂಪನಿಗಳು ತಯಾರಿ ನಡೆಸಿದೆ. ತಮ್ಮಲ್ಲಿನ ಉದ್ಯೋಗಿಗಳಿಗೆ 1 ವರ್ಷಕ್ಕೂ ಹೆಚ್ಚಿನ ಸಂಬಳವನ್ನು ವಜಾ ಕೊಡುಗೆಯಾಗಿ ನೀಡುವ ಆಮಿಶವೊಡ್ಡುತ್ತಿವೆ.
ಇನ್ನು ತಾವಾಗಿಯೇ ರಾಜೀನಾಮೆ ನೀಡಬಯಸುವವರಿಗೆ ಇನ್ನೂ ಹೆಚ್ಚಿನ ವಜಾ ಕೊಡುಗೆ ನೀಡಲಾಗುತ್ತೆ ಎಂಬ ಆಸೆ ಹುಟ್ಟು ಹಾಕುತ್ತಿದೆ.
5-8 ವರ್ಷಗಳ ಅನುಭವವಿರುವ ಕೆಲವು ಹಿರಿಯ ವ್ಯವಸ್ಥಾಪಕರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದರೆ ಅವರಿಗೆ ಒಂದು ವರ್ಷದ ವೇತನದ ಬೇರ್ಪಡಿಕೆ ಪ್ಯಾಕೇಜ್ ಅನ್ನು Amazon ನೀಡುವುದಾಗಿ ಘೋಷಿಸಿದೆ ಎಂದು ಮೂಲಗಳು ತಿಳಿಸಿವೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.