



ಬೆಂಗಳೂರು: ಆಟವಾಡುವಾಗ ಕಬ್ಬಿಣದ ಪೈಪ್ ನೊಳಗೆ ಒಂದೂವರೆ ವರ್ಷದ ಮಗುವಿನ ಕೈ ಸಿಲುಕಿಕೊಂಡ ಘಟನೆಯೊಂದು ಬೆಂಗಳೂರಿನ ಡೈರಿ ಕಾಲೋನಿಯ ಶಿವನ ದೇವಸ್ಥಾನದಲ್ಲಿ ನಡೆದಿದೆ.
ಆಡುಗೋಡಿ ನಿವಾಸಿ ಲೋಕೇಶ್ ದಂಪತಿ ಮಗುವಿನೊಂದಿಗೆ ನಿನ್ನೆ (ಏ.17) ಸಂಜೆ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಮಗುವನ್ನ ದೇವಸ್ಥಾನದ ಆವರಣದಲ್ಲಿ ಆಟವಾಡಲು ಬಿಟ್ಟಿದ್ದರು. ಈ ವೇಳೆ ಆಟವಾಡುತ್ತಾ ಕಂಬ ನೆಡಲು ಅಳವಡಿಸಿದ್ದ ಕಬ್ಬಿಣದ ಪೈಪ್ ನೊಳಗೆ ಮಗು ಸಚ್ಚು ಕೈ ಇಟ್ಟಿದ್ದಾಳೆ.
ಆ ಸಮಯದಲ್ಲಿ ಮಗುವಿನ ಕೈಯಲ್ಲಿ ಬೆಳ್ಳಿ ಕಡಗ ಇದ್ದಿದ್ದರಿಂದ ಸುಮಾರು ಒಂದೂವರೆ ಅಡಿ ಉದ್ದದ ಪೈಪ್ ನೊಳಗೆ ಮಗುವಿನ ಕೈ ಸಿಲುಕಿಕೊಂಡಿತು.
ಈ ವೇಳೆ ಸ್ಥಳದಲ್ಲಿದ್ದ ಟ್ರಾಫಿಕ್ ಕಾನ್ಸ್ ಟೇಬಲ್ ಹನುಮಂತ್ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮಣ್ಣಿನಲ್ಲಿ ಪೈಪ್ ಅಗೆದು ಕಬ್ಬಿಣದ ಪೈಪ್ ಕಟ್ ಮಾಡಿ ಮಗುವಿನ ಕೈ ಹೊರತೆಗೆದರು. ಸುಮಾರು ಎರಡು ಗಂಟೆಗಳ ಕಾಲ ಹರಸಾಹಸ ಪಟ್ಟು ಮಗುವಿನ ಕೈ ಹೊರತೆಗೆಯುವಲ್ಲಿ ಯಶಸ್ವಿಯಾದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.