



ಮಾವೋವಾದಿ ಗುಂಪುಗಳ ವಿರುದ್ಧದ ಹೋರಾಟ ಈಗ ಅಂತಿಮ ಹಂತದಲ್ಲಿದ್ದು ಅದನ್ನು ಕೊನೆಗೊಳಿಸಲು ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮಾವೋವಾದಿ ಬಂಡುಕೋರ ಗುಂಪುಗಳಿಗೆ ಹಣದ ಹರಿವನ್ನು ಕಟ್ಟಿಹಾಕಲು ಜಂಟಿ ಕಾರ್ಯತಂತ್ರ ಇರಬೇಕು ಎಂದು ಒಡಿಶಾ, ತೆಲಂಗಾಣ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಮಾವೋವಾದಿ ಗುಂಪುಗಳ ವಿರುದ್ಧದ ಹೋರಾಟ ಈಗ ಅಂತಿಮ ಹಂತದಲ್ಲಿದೆ. ಎಡಪಂಥೀಯ ಉಗ್ರಗಾಮಿ ಹಿಂಸಾಚಾರದಿಂದಾಗಿ ಒಂದು ವರ್ಷದಲ್ಲಿ ಸಾವಿನ ಸಂಖ್ಯೆ 200 ಕ್ಕೆ ಇಳಿದಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಿನ ವರ್ಷಕ್ಕೆ ಎಲ್ಲ ಮುಖ್ಯಮಂತ್ರಿಗಳು ಈ ಸಮಸ್ಯೆಯನ್ನು ಆದ್ಯತೆಯ ಮೇಲೆ ತೆಗೆದುಕೊಳ್ಳಬೇಕೆಂದು ಅವರು ಸೂಚಿಸಿದ್ದಾರೆ.
ಸಭೆಯಲ್ಲಿ ಮುಖ್ಯಮಂತ್ರಿಗಳಾದ ನವೀನ್ ಪಟ್ನಾಯಕ್ (ಒಡಿಶಾ), ಕೆ. ಚಂದ್ರಶೇಖರ್ ರಾವ್(ತೆಲಂಗಾಣ), ನಿತೀಶ್ ಕುಮಾರ್(ಬಿಹಾರ), ಶಿವರಾಜ್ ಸಿಂಗ್ ಚೌಹಾಣ್(ಮಧ್ಯ ಪ್ರದೇಶ), ಉದ್ಧವ್ ಠಾಕ್ರೆ(ಮಹಾರಾಷ್ಟ್ರ) ಮತ್ತು ಹೇಮಂತ್ ಸೊರೆನ್(ಜಾರ್ಖಂಡ್) ಭಾಗವಹಿಸಿದ್ದರು. ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಗಿರಿರಾಜ್ ಸಿಂಗ್, ಅರ್ಜುನ್ ಮುಂಡಾ ಮತ್ತು ನಿತ್ಯಾನಂದ ರೈ ಸಹ ಇದ್ದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಭೆಯಲ್ಲಿ ಭಾಗವಹಿಸಲಿಲ್ಲ. ಈ ರಾಜ್ಯಗಳನ್ನು ಸಚಿವರು ಅಥವಾ ಹಿರಿಯ ಅಧಿಕಾರಿಗಳು ಪ್ರತಿನಿಧಿಸಿದ್ದರು
ಮಾವೋವಾದಿ ಗುಂಪುಗಳ ವಿರುದ್ಧದ ಹೋರಾಟ ಈಗ ಅಂತಿಮ ಹಂತದಲ್ಲಿದ್ದು ಅದನ್ನು ಕೊನೆಗೊಳಿಸಲು ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.2009 ರಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 2,258 ರಿಂದ 2020 ರಲ್ಲಿ 665 ಕ್ಕೆ ಮಾವೋವಾದಿಗಳ ಹಿಂಸಾಚಾರದ ಘಟನೆಗಳು ಶೇಕಡ 70 ರಷ್ಟು ಕಡಿಮೆಯಾಗಿದೆ. ಮಾವೋವಾದಿಗಳ ಪ್ರಭಾವದಲ್ಲಿರುವ ಪ್ರದೇಶಗಳು 2010 ರಲ್ಲಿ 96 ಜಿಲ್ಲೆಗಳಿದ್ದವು. ಭೌಗೋಳಿಕ ಹರಡುವಿಕೆ 2020 ರಲ್ಲಿ ಕೇವಲ 53 ಕ್ಕೆ ಇಳಿದಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವವನ್ನು ಪ್ರತಿ ಹಂತಕ್ಕೂ ಹರಡಲು ಮತ್ತು ಅಭಿವೃದ್ಧಿಯಾಗದ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಮಾವೋವಾದಿ ದಂಗೆಯನ್ನು ನಿರ್ಮೂಲನೆ ಮಾಡುವುದು ಅಗತ್ಯ ಎಂದು ಹೇಳಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.