logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಆಪ್ಟೆಕ್ ನಿರ್ವಹಣೆಯ ಲ್ಯಾಕ್‌ಮಿ ಸಂಸ್ಥೆ ಪ್ರಸ್ತುತಪಡಿಸಿದ "ದಿ ಶೋಕೇಸ್" ಎಂಬ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಸೌಂದರ್ಯ ಮತ್ತು ಮೇಕಪ್ ವಿನ್ಯಾಸಗಳ ಅಧಿಕೃತ ಸ್ಪರ್ಧೆ ಆಯೋಜನೆ

ಟ್ರೆಂಡಿಂಗ್
share whatsappshare facebookshare telegram
28 Jan 2023
post image

ಆಪ್ಟೆಕ್ ನಿರ್ವಹಣಾ ಲ್ಯಾಕ್‌ಮಿ ಸಂಸ್ಥೆಯು "ದಿ ಶೋಕೇಸ್" ಶೀರ್ಷಿಕೆಯ ವಸ್ತ್ರ ವಿನ್ಯಾಸಗಳ ಸ್ಪರ್ಧೆಯ ಮೊದಲ ಆವೃತ್ತಿಯನ್ನು ಮುಕ್ತಾಯಗೊಳಿಸಿತು. ಗೋವಾದ ಅಲಿಲಾದಿವಾದಲ್ಲಿ ಸಾಕಷ್ಟು ಮೋಹಕ, ಮೆರುಗು ಮತ್ತು ಮಿನುಗುಗಳ ನಡುವೆ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿಗಳಿಂದ ಉತ್ತಮ ವೃತ್ತಿಪರ ಕೂದಲು ಮತ್ತು ಮೇಕಪ್ ವಿನ್ಯಾಸದ ಪ್ರಸತ್ತುತೆಯೊಂದಿಗೆ, ವಿನ್ಯಾಸಕ ಸಮಂತ್ ಚೌಹಾನ್‌ರೊಂದಿಗೆ ಕೆಳಗಿಳಿದ ಮಾಡೆಲ್‌ಗಳು, ಫ್ಯಾಶನ್ ಕೊರಿಯೋಗ್ರಾಫರ್ ನಿಶಾ ಹರಾಲೆ ಅವರ ಅದ್ಭುತ ನೃತ್ಯ ಸಂಭ್ರಮಿಸಿದರು.

ದೇಶಾದ್ಯಂತ ಆಪ್ಟೆಕ್ ಕೇಂದ್ರ ಗಳಿಂದ ನಿರ್ವಹಿಸುತ್ತಿರುವ ಲ್ಯಾಕ್‌ಮಿ ಸಂಸ್ಥೆಯಿAದ ೨೦೦೦ ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳು ಕೂದಲು, ಚರ್ಮ, ಮೇಕಪ್ ಮತ್ತು ಉಗುರುಗಳ ವಿವಿಧ ವಿಭಾಗಗಳಲ್ಲಿ ಪಾಲ್ಗೊಂಡರು ಮತ್ತು ೫೦೦ ಕ್ಕೂ ಹೆಚ್ಚು ಜನರು ಗೋವಾದಲ್ಲಿ ನಡೆದ 'ದಿ ಶೋಕೇಸ್' ನ ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದರು. ಭಾರತದಲ್ಲಿ ಗಣನೀಯವಾಗಿ ವಸ್ತ್ರ ವಿನ್ಯಾಸಗಳಲ್ಲಿ ಬೃಹತ್ ವಿದ್ಯಾರ್ಥಿ ಸಮುದಾಯವು ಸ್ಪರ್ಧಿಸಲು ಮತ್ತು ಚಿನ್ನ, ಬೆಳ್ಳಿ ಅಥವಾ ಕಂಚಿನ ಪ್ರಶಸ್ತಿಗಳನ್ನು ಪ್ರಶಸ್ತಿಗಳನ್ನು ಗೆಲ್ಲಲು ಸೀಮಿತ ಅವಧಿಯಲ್ಲಿ ತಂಡೋಪತAಡವಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಮುಂದಿನ ಯೋಜನೆಯ ಫ್ಯಾಷನ್ ಅಲಂಕೃತ ನೃತ್ಯ ಸಂಯೋಜಕಿ ಮತ್ತು ನಿರ್ದೇಶಕಿ ಫರಾ ಖಾನ್ ಅವರೊಂದಿಗೆ ಕೆಲಸ ಮಾಡಲು ವಿದ್ಯಾರ್ಥಿಗಳಿಗೆ ಉತ್ತೇಜಕ ಅವಕಾಶ ಸಿಗುತ್ತದೆ. ಅಷ್ಟೇ ಅಲ್ಲ, ವಿಜೇತರು ಲ್ಯಾಕ್‌ಮಿ ಫ್ಯಾಶನ್ ವೀಕ್‌ನ ನೇಪಥ್ಯದಲ್ಲಿ ಸಹಕಾರ್ಯ ಮಾಡಲು ನೇರ ಪ್ರವೇಶ ಪಡೆಯುತ್ತಾರೆ.

ನಿರ್ದೇಶಕ ಮತ್ತು ನೃತ್ಯ ಸಂಯೋಜಕರನ್ನು ಒಳಗೊಂಡ ತೀರ್ಪುಗಾರರ ತಂಡ - ಫರಾಹ್ ಖಾನ್; ಡಿಸೈನರ್ ಸಮಂತ್ ಚೌಹಾಣ್, ಮುಖ್ಯ ಮಾರುಕಟ್ಟೆ ಅಧಿಕಾರಿ, ಆಪ್ಟೆಕ್ ಲಿಮಿಟೆಡ್ - ಪ್ರವೀರ್ ಅರೋರಾ, ನ್ಯಾಷನಲ್ ಕ್ರಿಯೇಟಿವ್ ಡೈರೆಕ್ಟರ್-ಮೇಕಪ್, ಲ್ಯಾಕ್‌ಮಿ ಲಿವರ್ - ಅನುಪಮಾ ಕಟಿಯಾಲ್; ನ್ಯಾಷನಲ್ ಕ್ರಿಯೇಟಿವ್ ಡೈರೆಕ್ಟರ್-ಹೇರ್, ಲ್ಯಾಕ್‌ಮಿ ಲಿವರ್- ಪೂಜಾ ಸಿಂಗ್ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಲ್ಯಾಕ್‌ಮಿ ಲಿವರ್ - ಪುಷ್ಕರಾಜ್ ಶೆಣೈ, ವಿದ್ಯಾರ್ಥಿಗಳ ಕೆಲಸವನ್ನು ಮೌಲೀಕರಿಸಿದೆ ಮತ್ತು ಅದರ ಸೌತ್ ಕ್ಯಾಂಪಸ್ ದೆಹಲಿ ಕೇಂದ್ರವನ್ನು ಚಿನ್ನದ ವಿಜೇತ ಎಂದು ಘೋಷಿಸಿದೆ. ಮಲಾಡ್, ಮುಂಬೈ ಮತ್ತು ಕ್ಯಾಮಾಕ್ ಸ್ಟ್ರೀಟ್, ಕೋಲ್ಕತ್ತಾ ಕೇಂದ್ರಗಳು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪಡೆದರು. ಕಾರ್ಯಕ್ರಮವು ಸೃಜನಶೀಲ, ಆತ್ಮವಿಶ್ವಾಸ ಮತ್ತು ಕರಕುಶಲತೆಯ ಉತ್ತಮ ಪ್ರದರ್ಶನವನ್ನು ಕಂಡಿತು, ವಿದ್ಯಾರ್ಥಿಗಳು ನಾಳೆಯ ಉದ್ಯಮ-ಸಿದ್ಧ ವೃತ್ತಿಪರರಾಗಲು ತಯಾರಾಗಿದ್ದಾರೆ. ನವೆಂಬರ್‌ನಲ್ಲಿ ಪ್ರಾದೇಶಿಕ ಮಟ್ಟದ ಮೊದಲ ಸುತ್ತುಗಳನ್ನು ಕೈಗೊಳ್ಳುವುದರೊಂದಿಗೆ ಈ ಬೃಹತ್ ಸ್ಪರ್ಧೆಯು ಪ್ರಾರಂಭವಾಯಿತು. ವಿದ್ಯಾರ್ಥಿಗಳಿಗೆ ಕಾಲ್ಪನಿಕ ಕಥೆಯ ಭ್ರಮೆ, ಕಲೆಯ ಪ್ರಕಾರ, ಪ್ರಾಯೋಗಿಕ ಕೆಲಸ ಮುಂತಾದ ವಿಷಯಗಳ ಕೂದಲು, ಮೇಕಪ್, ಮತ್ತು ಉಗುರುಗಳು ಮತ್ತು ಚರ್ಮದಂತಹ ಪ್ರತ್ಯೇಕ ವಿಭಾಗಗಳಲ್ಲಿ ನೀಡಲಾಯಿತು. ಪ್ರತಿ ತಂಡದಲ್ಲಿ ೫ ಜನರಂತೆ ೧೦೦ ತಂಡಗಳು ಗೋವಾಕ್ಕೆ ಸೆಮಿ-ಫೈನಲ್‌ಗೆ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದವು.

ಆಪ್ಟೆಕ್ ಲಿಮಿಟೆಡ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಶ್ರೀ ಪ್ರವೀರ್ ಅರೋರಾ ಕಾರ್ಯಕ್ರಮ ಕುರಿತು ಮಾತನಾಡುತ್ತ “ಆಪ್ಟೆಕ್ ನಿರ್ವಹಿಸುತ್ತಿರುವ ಲ್ಯಾಕ್‌ಮಿ ಸಂಸ್ಥೆಯಲ್ಲಿ ಆಕಾಂಕ್ಷಿಗಳಿಗೆ ಒಂದರ ನಂತರ ಒಂದರAತೆ ವಿಶಿಷ್ಟ ವೇದಿಕೆಗಳನ್ನು ನೀಡುವ ಮೂಲಕ ದೊಡ್ಡ ಕನಸು ಕಾಣಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಡಿಜಿಟಲ್ ಪತ್ರಿಕೆ ಮುಖಪುಟ ಅಂತಿಮಗೊಳಿಸಿದ ನಂತರ ದೇಶದ ಉನ್ನತ ನಿಯತಕಾಲಿಕೆಗಳಲ್ಲಿ ಕೆಲಸ ಮಾಡುವ ಕನಸುಗಾರರ ಈ ಪ್ರಯಾಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಇದು ಅತುತ್ತಮ ಪ್ರದರ್ಶನ ಆಗಿರಬೇಕು. ಬಾಲಿವುಡ್‌ಗೆ ಪ್ರವೇಶಿಸುವ ಮತ್ತು ಪ್ರಸಿದ್ಧ ಮೇಕಪ್ ಕಲಾವಿದರಾಗುವ ಅವರ ಕನಸನ್ನು ನನಸಾಗಿಸುವ ಜೊತೆಗೆ ಭಾರತೀಯ ವಿನ್ಯಾಸಕರೊಬ್ಬರೊಂದಿಗೆ ಪ್ರತ್ಯೇಕವಾಗಿ ಕಾರ್ಯ ಅವಕಾಶ ಪಡೆಯಲಿದ್ದಾರೆ. ಪಠ್ಯಕ್ರಮ, ಶಿಕ್ಷಣಶಾಸ್ತ್ರ ವಿನ್ಯಾಸಗೊಳಿಸುವುದರ ಜೊತೆ ಉದ್ಯಮದಲ್ಲಿ ಸರಿಯಾದ ಮಾನ್ಯತೆ ಪಡೆಯುವವರೆಗೆ ವಿದ್ಯಾರ್ಥಿಗಳ ಕೌಶಲ್ಯ ರೂಡಿಸಿಕೊಳ್ಳಬೇಕು. ಅತ್ಯುತ್ತಮ ಕೂದಲು, ಮೇಕಪ್, ಚರ್ಮ, ಮೇಕಪ್ ಮತ್ತು ಉಗುರುಗಳ ವಿನ್ಯಾಸಗಳ ಪ್ರಯಾಣದಲ್ಲಿ ನಿಸ್ಸಂದೇಹವಾಗಿ ನಮ್ಮ ವಿದ್ಯಾರ್ಥಿಗಳಿಗೆ ಎಲ್ಲವನ್ನೂ ನೀಡಿದ್ದಕ್ಕಾಗಿ ಹೆಮ್ಮೆಪಡುತ್ತೇವೆ, ಈಗಾಗಲೇ ಅವರು ತಜ್ಞರಾಗಿದ್ದಾರೆ ಎಂದು ಹೇಳುತ್ತೇನೆ. ನುರಿತ ಉದ್ಯೋಗಾರ್ಹ ವೃತ್ತಿಪರರನ್ನು ರಚಿಸುವ ಈ ಧ್ಯೇಯದೊಂದಿಗೆ, ಈ ಉದ್ಯಮದಲ್ಲಿ ವೃತ್ತಿಜೀವನ ಸಕ್ರಿಯಗೊಳಿಸಲು ನಮ್ಮಿಂದ ಸಾಧ್ಯವಾದಷ್ಟು ಉತ್ತಮವಾದದ್ದನ್ನು ನೀಡಲು ನಾವು ನಿರೀಕ್ಷೆಗಳನ್ನು ಮೀರಿ ಪ್ರಯತ್ನಿಸುವುದನ್ನು ಮುಂದುವರಿಸುತ್ತೇವೆ. ಈ ಪ್ರದರ್ಶನದ ದೊಡ್ಡ ಯಶಸ್ಸಿಗಾಗಿ ನಾನು ಎಲ್ಲಾ ವಿಜೇತರು, ಅಂತಿಮ ಸ್ಪರ್ಧಿಗಳು ಮತ್ತು ಭಾಗವಹಿಸುವವರನ್ನು ಅಭಿನಂದಿಸುತ್ತೇನೆ" ಎಂದು ಹೇಳಿದರು.

ಲ್ಯಾಕ್‌ಮಿ ಲಿವರ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪೂರ್ಣಕಾಲಿಕ ನಿರ್ದೇಶಕರಾದ ಶ್ರೀ ಪುಷ್ಕರಾಜ್ ಶೆಣೈ ಅವರು ಮಾತನಾಡಿ, “ಭಾರತದಲ್ಲಿ ವೃತ್ತಿಪರ ಸೌಂದರ್ಯ ಮತ್ತು ಸ್ವಾಸ್ಥ್ಯ ಉದ್ಯಮವು ವಿಭಜಿಸುವ ಹಂತದಲ್ಲಿದೆ. ಸೃಜನಶೀಲತೆ, ಕರಕುಶಲತೆ ಮತ್ತು ಉತ್ಸಾಹದಿಂದ ಶಸ್ತ್ರಸಜ್ಜಿತ ಯುವ ಪ್ರತಿಭೆಗಳೊಂದಿಗೆ, ಭಾರತವು ಕೇವಲ ಬೆಳೆಯಲು ಮಾತ್ರವಲ್ಲ ಜಗತ್ತಿನಲ್ಲಿ ಪ್ರಬಲ ಪಾತ್ರವನ್ನು ವಹಿಸಲು ಸಿದ್ಧವಾಗಿದೆ. ಆಪ್ಟೆಕ್ ನಿಂದ ಸಹಭಾಗಿತ್ವದಲ್ಲಿ ಲ್ಯಾಕ್‌ಮಿ ಸಲೂನ್ ಮತ್ತು ಲ್ಯಾಕ್‌ಮಿ ಸಂಸ್ಥೆಯಲ್ಲಿ ನಮ್ಮ ಪ್ರಮುಖ ಉದ್ದೇಶ ಉದ್ಯಮದಲ್ಲಿನ ವೃತ್ತಿಪರರ ಭವಿಷ್ಯ ಸುಂದರಗೊಳಿಸುವುದಾಗಿದೆ. ಪ್ರದರ್ಶನ ಅದನ್ನು ಹಿಗ್ಗಿಸುತ್ತದೆ, ಮಹತ್ವಾಕಾಂಕ್ಷೆ ಪ್ರಚೋದಿಸುತ್ತದೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಸೃಜನಶೀಲತೆ ಮತ್ತು ಕರಕುಶಲತೆ ಪ್ರದರ್ಶಿಸಲು ವೇದಿಕೆ ನೀಡಿದೆ. ಲ್ಯಾಕ್‌ಮಿ ಸಲೂನ್‌ನೊಂದಿಗೆ ಲಾಭದಾಯಕ ಕಾರ್ಪೊರೇಟ್ ವೃತ್ತಿ ಮತ್ತು ಉದ್ಯಮಶೀಲತೆಯ ಅವಕಾಶಗಳಿಗಾಗಿ ದಿಟ್ಟ ಹೆಜ್ಜೆಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಚಲನಚಿತ್ರ ನಿರ್ದೇಶಕಿ ಮತ್ತು ನೃತ್ಯ ಸಂಯೋಜಕಿ ಫರಾಹ್ ಖಾನ್ ಕುಂದರ್, ಮಾತನಾಡುತ್ತ "ಆಪ್ಟೆಕ್ ನ ಲ್ಯಾಕ್‌ಮಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಾಗಿ ಅವರ ಸ್ಪರ್ಧೆಯಲ್ಲಿ ಪ್ರಥಮ ತೀರ್ಪುಗಾರರ ಸಮಿತಿಯಲ್ಲಿ ಇರಲು ನನ್ನನ್ನು ಆಹ್ವಾನಿಸಿದೆ. ಈ ವಿದ್ಯಾರ್ಥಿಗಳು ಸೌಂದರ್ಯ ಮತ್ತು ಮೇಕಪ್ ಉದ್ಯಮದ ಭವಿಷ್ಯವಾಗಲಿದ್ದಾರೆ, ಅವರಲ್ಲಿ ಅನೇಕರು ತಮ್ಮ ಕಲೆಗಾರಿಕೆಗೆ ಉದ್ಯಮದ ಹೆಸರುಗಳಾಗಬಹುದು. ನನ್ನ ಮುಂದಿನ ಯೋಜನೆಯಲ್ಲಿ ಆಪ್ಟೆಕ್ ನ ಲ್ಯಾಕ್‌ಮಿ ಸಂಸ್ಥೆಯ ವಿಜೇತ ತಂಡಗಳೊAದಿಗೆ (ಎಲ್ಲಾ ೧೫ ವಿದ್ಯಾರ್ಥಿಗಳು) ಕೆಲಸ ಮಾಡಲು ನಾನು ತುಂಬಾ ಉತ್ಸುಕನಾಗಿದ್ದೇನೆ - ಅದು ಹಾಡು, ಸಂಗೀತ ವೀಡಿಯೊ, ಚಲನಚಿತ್ರ ಯಾವುದಾದರೂ ಆಗಿರಬಹುದು. ಅವರು ಹೊಸ ಆಲೋಚನೆಗಳನ್ನು ತರುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ" ಎಂದು ಹೇಳಿದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.