logo
WhatsApp Image 2026-04-02 at 14.46.04.jpeg
hindalco everlast.jpeg

ಭಾರತ ಮತ್ತು MIOಗೆ ಹೆಮ್ಮೆಯ ಕ್ಷಣ: ಡಾ. ವಿಶ್ವಪ್ರಿಯಾ ಗೋದ್ಖಿಂಡಿ ಅವರಿಗೆ ಪ್ರತಿಷ್ಠಿತ ಯುರೋಪಿಯನ್ ಪಥಾಲಜಿ ಗೌರವ

ಟ್ರೆಂಡಿಂಗ್
share whatsappshare facebookshare telegram
11 May 2026
post image

ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ (MIO) ಯೊಂದಿಗೆ ಪಥಾಲಜಿ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ವಿಶ್ವಪ್ರಿಯಾ ಗೋದ್ಖಿಂಡಿ ಅವರು ಪ್ರತಿಷ್ಠಿತ European Society of Pathology Academy 2026 ಗೆ ಆಯ್ಕೆಯಾಗಿದ್ದಾರೆ.

ಪಥಾಲಜಿ ಕ್ಷೇತ್ರದಲ್ಲಿ ಅವರ ಶೈಕ್ಷಣಿಕ ಹಾಗೂ ವೃತ್ತಿಪರ ಸಾಧನೆಯನ್ನು ಗುರುತಿಸಿ ಈ ಗೌರವ ಲಭಿಸಿದೆ. 2026ನೇ ಸಾಲಿನಲ್ಲಿ ಯೂರೋಪಿಯನ್ ಸೊಸೈಟಿ ಆಫ್ ಪಥಾಲಜಿ (EPS) ವತಿಯಿಂದ ಆಯ್ಕೆಯಾದ ಏಕೈಕ ಭಾರತೀಯ ಪ್ರಶಸ್ತಿ ಪುರಸ್ಕೃತರು ಡಾ. ವಿಶ್ವಪ್ರಿಯಾ ಗೋದ್ಖಿಂಡಿ ಆಗಿದ್ದಾರೆ.

ಈ ಪ್ರತಿಷ್ಠಿತ ಅಂತರರಾಷ್ಟ್ರೀಯ ಮಾನ್ಯತೆಗೆ ಡಾ. ವಿಶ್ವಪ್ರಿಯಾ ಗೋದ್ಖಿಂಡಿ ಅವರನ್ನು MIO ಆಡಳಿತ ಮಂಡಳಿ, ವೈದ್ಯರು ಹಾಗೂ ಸಿಬ್ಬಂದಿ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

ಈ ಸಾಧನೆ MIO ಸಂಸ್ಥೆಯಲ್ಲಿನ ಶೈಕ್ಷಣಿಕ ಗುಣಮಟ್ಟ ಮತ್ತು ಉತ್ತಮ ಕ್ಯಾನ್ಸರ್ ನಿರ್ಣಯ ಹಾಗೂ ಚಿಕಿತ್ಸೆಯತ್ತ ಇರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅವರ ಮುಂದಿನ ಶೈಕ್ಷಣಿಕ ಹಾಗೂ ಸಂಶೋಧನಾ ಕಾರ್ಯಗಳಿಗೆ MIO ವತಿಯಿಂದ ಶುಭ ಹಾರೈಕೆಗಳನ್ನು ತಿಳಿಸಲಾಗಿದೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.