



ಉಡುಪಿ:
ಗೋಸ್ವಾಲ್ ಸಂಸ್ಥೆಯು ವಿಶ್ವ ಆಯುರ್ವೇದ ಪರಿಷತ್ ನ ಸಹಯೋಗದೊಂದಿಗೆ ಧನ್ವಂತರಿ ಜಯಂತಿ- ರಾಷ್ಟ್ರೀಯ ಆಯುರ್ವೇದ ದಿನ ಅಂಗವಾಗಿ 'ಸಮುದ್ರಮಂಥನ ಮಹೋತ್ಸವ'ವನ್ನು ಅಕ್ಟೋಬರ್ 23 ಸಂಜೆ 5 ಗಂಟೆಗೆ ಕುಂದಾಪುರ- ತೆಕ್ಕಟ್ಟೆಯ ಕೊಮೆ ಕಡಲ ತೀರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ತನ್ಮಯ ಗೋಸ್ವಾಮಿ ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಆಯುರ್ವೇದ ವಿದ್ವಾಂಸ, ಲೇಖಕ ಪ್ರೊ. ಬನ್ವಾರಿ ಲಾಲ್ ಗೌರ್, ಸ್ತ್ರೀರೋಗ ತಜ್ಞೆ ಡಾ. ಸಾವಿತ್ರಿ ದೈತೋಟ, ನಾಟಿವೈದ್ಯ ಮುಲ್ಕಿ ಗಂಗಾಧರ್ ಶೆಟ್ಟಿ ಹಾಗೂ ಯೋಗ ಚಿಕಿತ್ಸಾ ತಜ್ಞೆ ಝರುಬಿನಾ ರೆಜಿನಾ ನಿಕೋಲಾವ್ನಾ ಅವರಿಗೆ "ಗೋಸ್ವಾಲ್ ಕಿರಣ್" ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಸಭಾಕಾರ್ಯಕ್ರಮ ನಂತರ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ 'ದೇವ ವೈದ್ಯ ಧನ್ವಂತರಿ' ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಮಾಶಂಕರ್ ಇದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.