logo
WhatsApp Image 2026-04-02 at 14.46.04.jpeg
hindalco everlast.jpeg

ಬೆಳ್ಮಣ್ ನಲ್ಲಿ ಮನೆಯ ಶೆಡ್ ನಲ್ಲಿ ಇಟ್ಟಿದ್ದ ಸ್ಕೂಟರ್ ಕಳವು

ಟ್ರೆಂಡಿಂಗ್
share whatsappshare facebookshare telegram
4 Aug 2022
post image

ಕಾರ್ಕಳ:

ಮನೆಯ ಶೆಡ್ ನಲ್ಲಿ ಇಟ್ಟಿದ್ದ ಸ್ಕೂಟರ್ ಅನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದಲ್ಲಿ ನಡೆದಿದೆ. ಬೆಳ್ಮಣ್ ನಿವಾಸಿ ಸತ್ಯನಾರಾಯಣ ಭಟ್ ಅವರು ತನ್ನ ಸ್ಕೂಟರ್ ಅನ್ನು ಎಂದಿನಂತೆ ಮನೆಯ ಶೆಡ್ ನಲ್ಲಿ ಇಟ್ಟಿದ್ದರು. ಆದರೆ, ಬೆಳಿಗ್ಗೆ ಎದ್ದು ನೋಡುವಾಗ HONDA ACTIVE ಸ್ಕೂಟರ್ ನಿಲ್ಲಿಸಿದ ಜಾಗದಲ್ಲಿ ಇರಲಿಲ್ಲ. ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ಕೂಟರಿನ ಮೌಲ್ಯ 30ಸಾವಿರ ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.