


ಉಬರ್ ಸಂಸ್ಥೆಯು ಉಬರ್ ಮೋಟೋ ವುಮೆನ್ ಸೇವೆಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಬೈಕ್ ಟ್ಯಾಕ್ಸಿಗಳನ್ನು ಮಹಿಳೆಯರೇ ನಿರ್ವಹಿಸುವ ಮೊದಲ ಮಾದರಿಯ ಸೇವೆಯಾಗಿದೆ. ಮಹಿಳೆಯರಿಗೆ ಮಾತ್ರ ಈ ಸೇವೆಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಕಂಪೆನಿಯು 250 ಮಹಿಳಾ ರೈಡರ್‌ಗಳಿಗೆ ಆರಂಭದಲ್ಲಿ ಸೇವೆಯನ್ನು ಪ್ರಾರಂಭಿಸಿದ್ದು, ಮುಂಬರುವ ದಿನಗಳಲ್ಲಿ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಮತ್ತು ಇತರ ನಗರಗಳಿಗೆ ವಿಸ್ತರಿಸುವುದಾಗಿ ತಿಳಿಸಿದೆ. ಇದೊಂದು ಮಹಿಳಾ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯ ಸೇವೆ ಎನ್ನಲಾಗುತ್ತಿದೆ.
ಅಂದ ಹಾಗೆ ಈ ಆನ್-ಡಿಮಾಂಡ್ ದ್ವಿಚಕ್ರ ವಾಹನ ಸವಾರಿ ಸೇವೆಯು ಮಹಿಳಾ ಸವಾರರೊಂದಿಗೆ ಮಹಿಳಾ ಗ್ರಾಹಕರನ್ನು ಸಂಪರ್ಕಿಸುತ್ತದೆ. ಮಹಿಳಾ ಸುರಕ್ಷತೆ ಮತ್ತು ಚಲನಶೀಲತೆಯ ಅಗತ್ಯಗಳನ್ನು ಪರಿಹರಿಸಲು ವಿನ್ಯಾಸಗೊಳಿಸಲಾಗಿದೆ. ಸದ್ಯದಲ್ಲಿಯೇ ಈ ಸೇವೆ ಮಹಿಳೆಯವರಿಗೆ ಲಭ್ಯವಾಗಲಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.