



ಕಠ್ಮಂಡು(ನೇಪಾಳ):ಗುರುವಾರ ರಾತ್ರಿ ಹಾಗೂ ತಡರಾತ್ರಿ ನೇಪಾಳದಲ್ಲಿ ಎರಡು ಗಂಟೆಗಳ ಅಂತರದಲ್ಲಿ ಭೂಮಿ ಮೂರು ಬಾರಿ ಕಂಪಿಸಿದೆ.
ರಿಕ್ಟರ್ ಮಾಪಕದಲ್ಲಿ 4.4, 5.0 ಮತ್ತು 3.6 ತೀವ್ರತೆಯ ಭೂಕಂಪನ ದಾಖಲಾಗಿದೆ. ಬಜುರಾದ ದಹಕೋಟ್‌ನಲ್ಲಿ ಭೂಕಂಪನಗಳ ಕೇಂದ್ರ ಬಿಂದುಗಳು ಪತ್ತೆಯಾಗಿವೆ.
ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಈ ಮಾಹಿತಿ ನೀಡಿದ್ದು, ಗುರುವಾರ ರಾತ್ರಿ 11.43ಕ್ಕೆ ಭೂಕಂಪ ಉಂಟಾಗಿದ್ದು, 4.4 ತೀವ್ರತೆ ದಾಖಲಾಗಿದೆ. ಬಳಿಕ ತಡರಾತ್ರಿ 1.15 ಗಂಟೆಗೆ 5.0 ತೀವ್ರತೆಯ ಭೂಕಂಪನ ಸಂಭವಿಸಿತು. ಇದಾದ 21 ನಿಮಿಷದ ಬಳಿಕ ಅಂದ್ರೆ ಗುರುವಾರ ತಡರಾತ್ರಿ 1.36 ಗಂಟೆಗೆ 3.6 ತೀವ್ರತೆಯಲ್ಲಿ ಭೂಮಿ ಕಂಪಿಸಿತು ಎಂದು ನೇಪಾಳದ ಸುರ್ಖೆತ್ ಜಿಲ್ಲೆಯ ಭೂಕಂಪನ ಕೇಂದ್ರದ ಅಧಿಕಾರಿ ರಾಜೇಶ್ ಶರ್ಮಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಮಾಹಿತಿಯಲ್ಲಿ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.