



ಕಾರ್ಕಳ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನಿಯೊಂದಿಗೆ ಒಂದು ದಿನ ಎನ್ನುವ ವಿಶೇಷ ಕಾರ್ಯಕ್ರಮವನ್ನು ಇಸ್ರೋ ವಿಜ್ಞಾನಿ ಶ್ರೀ ಜನಾರ್ಧನ ರಾವ್ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇಸ್ರೋ ವಿಜ್ಞಾನಿ ಶ್ರೀಯುತ ಜನಾರ್ದನ ರಾವ್ ಎರಡನೇ ಚಂದ್ರಯಾನ ವಿಫಲತೆಯು ಮೂರನೇ ಚಂದ್ರಯಾನದ ಸಫಲತೆಗೆ ಹೇಗೆ ಕಾರಣವಾಯಿತು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಗಣಕ ವಿಜ್ಷಾನ ಉಪನ್ಯಾಸಕರಾದ ರಾಮಚಂದ್ರರವರ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ಸೈನ್ಸ್ ಪುಸ್ತಕದ ೨ನೇ ಆವೃತ್ತಿಯನ್ನು ಮುಖ್ಯ ಅತಿಥಿಗಳಾದ ಶ್ರೀ ಜನಾರ್ಧನ ರಾವ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಶ್ರಿ ಅಮರೇಶ್ ಕುಮಾರ್ ಹೆಗ್ಡೆಯವರು ಜೊತೆಯಾಗಿ ಬಿಡುಗಡೆಗೊಳಿಸಿದರು. ಕನ್ನಡ ಉಪನ್ಯಾಸಕರಾದ ವೀಣೇಶ್ ಅಮೀನ್‌ರವರು ಪುಸ್ತಕವನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಶ್ರೀಯಾ ಗಣೇಶ್ ಅಡಿಮೂಳೆ ಕಾರ್ಯಕ್ರಮ ನಿರೂಪಿಸಿ ದಿಶಾ ಶೆಟ್ಟಿ ಪ್ರಾರ್ಥಿಸಿ, ರಸಾಯನ ಶಾಸ್ತç ಉಪನ್ಯಾಸಕಿ ಶ್ರಿಮತಿ ಪ್ರೀತಿ ಪಿ ಹೆಗ್ಡೆ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ನಾಯಕ ಆದಿತ್ಯ ದೇವಾಡಿಗ ವಂದಿಸಿದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.