



ಶಾಲೆಯ ವಾಶ್ ರೂಂನಲ್ಲಿ 11 ವರ್ಷದ ವಿದ್ಯಾರ್ಥಿನಿಯೊಬ್ಬಳು(Girl found dead in washroom) ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ನವಿ ಮುಂಬೈನ ವಾಶಿಯಲ್ಲಿ ಶನಿವಾರ ನಡೆದಿರುವ ಬಗ್ಗೆ ವರದಿಯಾಗಿದೆ. ಕೆಲ ವರದಿಗಳ ಪ್ರಕಾರ, ಸೇಂಟ್ ಮೇರಿಸ್ ವಿವಿಧೋದ್ದೇಶ ಪ್ರೌಢಶಾಲೆ ಮತ್ತು ಜೂನಿಯರ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿದೆ. ಕೋಪರ್ ಖೈರಾನೆ ಮೂಲದ ಮುಗ್ದಾ ಕದಮ್ ಎಂಬ ವಿದ್ಯಾರ್ಥಿನಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಮೃತಪಟ್ಟಿದ್ದಾಳೆ.
ಶನಿವಾರ ಬೆಳಿಗ್ಗೆ 10.30ರ ವಿರಾಮದ ಸಮಯದಲ್ಲಿ ವಿದ್ಯಾರ್ಥಿನಿ 3ನೇ ಮಹಡಿಯಲ್ಲಿರುವ ವಾಶ್ ರೂಂಗೆ ಹೋಗಿದ್ದಳು ಎನ್ನಲಾಗಿದೆ. ಈ ವಿರಾಮದ ಬಳಿಕ ಆಕೆ ಹಿಂತಿರುಗದಿದ್ದ ಹಿನ್ನೆಲೆ ಸಹಪಾಠಿಗಳು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ.
ಶಾಲಾ ಮಕ್ಕಳು ವಿದ್ಯಾರ್ಥಿನಿ ಕಾಣದೆ ಇರುವುದನ್ನು ತಿಳಿಸಿದ ಹಿನ್ನೆಲೆ ಶಿಕ್ಷಕರು ಆಕೆಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಈ ನಡುವೆ ಹೌಸ್ ಕೀಪಿಂಗ್ ಸಿಬ್ಬಂದಿ ವಾಶ್ ರೂಂಗೆ ಹೋಗಿ ನೋಡಿದ ಸಂದರ್ಭ ಒಂದು ಬಾಗಿಲು ಲಾಕ್ ಆಗಿರುವುದು ಕಂಡುಬಂತು. ಇದಲ್ಲದೆ,ಯಾವುದೇ ಪ್ರತಿಕ್ರಿಯೆ ಕೂಡ ಬಾರದೆ ಇದ್ದಾಗ ಬಾಗಿಲು ಒಡೆದು ನೋಡಿದಾಗ ವಿದ್ಯಾರ್ಥಿನಿ ನೆಲದ ಮೇಲೆ ಬಿದ್ದಿರುವುದು ಗೋಚರಿಸಿದೆ. ಹೀಗಾಗಿ, ತಕ್ಷಣವೇ, ಕೂಡಲೇ ವಿದ್ಯಾರ್ಥಿನಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾದರು ಕೂಡ ಅಷ್ಟರಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದಾರೆ.
ಈ ಪ್ರಕರಣದ ಕುರಿತಂತೆ ಮಾಹಿತಿ ಪಡೆದ ವಾಶಿ ಪೊಲೀಸರು ಅಧಿಕಾರಿಗಳ ತಂಡವನ್ನು ಶಾಲೆಗೆ ರವಾನಿಸಿ , ಈ ಕುರಿತಂತೆ ಆಕಸ್ಮಿಕ ಸಾವಿನ ಪ್ರಕರಣವನ್ನ ಕೋಪರ್ಖೈರಾನೆ ಪೊಲೀಸ್ ಠಾಣೆಯ ಅಧಿಕಾರಿಗಳು ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.