


ಕುಂದಾಪುರ: ಗಂಗೊಳ್ಳಿ ನದೀಮುಖ ಪ್ರದೇಶದಲ್ಲಿ ಆಗಸ್ಟ್ 26ರಂದು ‘ಶ್ರೀ ಬಾಲಾಂಜನೇಯ’ ದೋಣಿಯೊಂದಿಗೆ ಸಮುದ್ರದಲ್ಲಿ ಮುಳುಗಿದ್ದ ಮೀನುಗಾರಿಕಾ ಬಲೆಗಳನ್ನು ಯಶಸ್ವಿಯಾಗಿ ಮೇಲಕ್ಕೆ ತರಲಾಗಿದೆ.
ಕಾಂಚನಗಂಗಾ ದೋಣಿ ಮಾಲೀಕ ಚಂದ್ರ ಖಾರ್ವಿ ನೀಡಿದ ಮಾಹಿತಿಯ ಆಧಾರದ ಮೇಲೆ ಗಂಗೊಳ್ಳಿಯ ದಿನೇಶ್ ಖಾರ್ವಿ ನೇತೃತ್ವದಲ್ಲಿ 34 ಮೀನುಗಾರರು ಪರ್ಸ್‌ಸೀನ್ ದೋಣಿಯಲ್ಲಿ ಸಮುದ್ರಕ್ಕೆ ತೆರಳಿದರು. ಮೀನುಗಾರರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಮುಳುಗಿದ್ದ ಬಲೆಗಳನ್ನು ಪತ್ತೆಹಚ್ಚಿ ಹೊರತೆಗೆಯಲಾಯಿತು.
ತಂಡವು ಬೆಳಿಗ್ಗೆ 6 ಗಂಟೆಗೆ ಕಾರ್ಯಾಚರಣೆ ಆರಂಭಿಸಿ ಸೋಮವಾರ ಸಂಜೆ 4 ಗಂಟೆಯವರೆಗೆ ಸಮುದ್ರದಲ್ಲೇ ಕಾರ್ಯಾಚರಣೆ ಮುಂದುವರಿಸಿತು. ಈ ವೇಳೆ ಸುಮಾರು 700 ವಾರ ಉದ್ದದ ಮೀನುಗಾರಿಕಾ ಬಲೆಯನ್ನು ದಡಕ್ಕೆ ತಂದು ಸಂಬಂಧಪಟ್ಟ ದೋಣಿ ಮಾಲೀಕರಿಗೆ ಹಸ್ತಾಂತರಿಸಲಾಯಿತು.
ಸಮುದ್ರದಲ್ಲಿ ಮುಳುಗಿ ಬಳಿಕ ಪತ್ತೆಯಾದ ಮೀನುಗಾರಿಕಾ ಬಲೆಯ ಅಂದಾಜು ಮೌಲ್ಯ ₹30 ಲಕ್ಷ ಎಂದು ತಿಳಿದುಬಂದಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.