



ಕಾರ್ಕಳ:ಅಭಿವೃದ್ಧಿ ಹಾಗು ಸ್ವಚ್ಛ ಕಾರ್ಕಳದ ಪರಿಕಲ್ಪನೆಯನ್ನು ಗ್ರಾಮಗಳಲ್ಲಿ ಅಳವಡಿಸುವ ಮೂಲಕ ಅಭಿವೃದ್ಧಿಗೆ ವೇಗದೊರಕಿದೆ. 237 ಕಿಂಡಿ ಅಣೆಕಟ್ಟುಗಳ ಮೂಲಕ ಕೃಷಿ ಕ್ಷೇತ್ರಕ್ಕೆ ವೇಗ ದೊರಕಿದೆ. ಶಿಕ್ಷಣ ಕ್ಷೇತ್ರಕ್ಕೆ ಕೆಜೆ ಟಿಟಿ ಐ , ನರ್ಸಿಂಗ್ ಕಾಲೇಜು ನಿರ್ಮಾಣದ ಮೂಲಕ ಶಿಕ್ಷಣ ಕ್ಕೆ ಮಹತ್ತರ ವಾದ ಒತ್ತು ನೀಡಲಾಗಿದೆ.ಪ್ರವಾಸೋದ್ಯಮ ಮೂಲಕ ಉತ್ತೇಜನ ನೀಡುವ ಮೂಲಕ ಕಾರ್ಕಳ ದ ಹೆಮ್ಮೆ ಹೆಚ್ಚಿದೆ ಕರೋನ ಸಂಕಷ್ಟ ಸವಾಲುಗಳ ಸಂದರ್ಭದಲ್ಲಿ ಕ್ವಾರಂಟೈನ್ ಕೇಂದ್ರ ಗಳನ್ನು ಕಲ್ಪಿಸುವ ಮೂಲಕ ಬಿಜೆಪಿ ಮುಂಬಯಿ ಪುಣೆ ಅಗಮಿಸಿದ 3500 ಜನರನ್ನು ಯಾವುದೇ ಜಾತಿ ತಾರತಮ್ಯ ಮಾಡದೆ 35 ಕ್ವಾರಂಟೈನ್ ಕೇಂದ್ರಗಳನ್ನು ತೆರೆದು ಸಹಕಾರ ಬಿಜೆಪಿ ನೀಡಿತ್ತು.
ಇಂದು ಕಾರ್ಕಳದ ಲ್ಲಿ ಬಿಜೆಪಿ ಆಡಳಿತವನ್ನು ಮೆಚ್ಚಿ ಮೂವತ್ತು ಸಾವಿರ ಜನ ಬೆಂಬಲಿಸಿದ್ದಾರೆ ಎಂದು ಸುನೀಲ್ ಕುಮಾರ್ ಹೇಳಿದರು. ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಬಿಜೆಪಿ ಪಕ್ಷದ ಫಲಾನಭವಿ ಎಂದು ವ್ಯಂಗ್ಯವಾಡಿದರು ಗ್ರಾಮ ಗ್ರಾಮಗಳ ಅಭಿವೃದ್ಧಿ: 2018 ರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ ಪರಿಣಾಮ ಕ್ಷೇತ್ರದ ಗ್ರಾಮ ಗ್ರಾಮಗಳ ಆಬಿವೃದ್ದಿಯಾಗಿದೆ. ಹತ್ತು ವರ್ಷಗಳ ಅಬಿವೃದ್ದಿ ದೃಷ್ಠಿಕೋನವೇ ಕಾರ್ಕಳ ಕ್ಷೇತ್ರದ ಶ್ರೀರಕ್ಷೆ ಯಾಗಿದೆ, ಶಿಕ್ಷಣ, ಪ್ರವಾಸೋದ್ಯಮ, ಮೂಲಭೂತ ಸೌಕರ್ಯ ಗಳು, ಉದ್ಯೋಗಾವಕಾಶಗಳನ್ನು ಕಲ್ಪಿಸುವಲ್ಲಿ ಬಿಜೆಪಿಯೇ ಮುಖ್ಯ ಪಾತ್ರ ವಹಿಸುತ್ತದೆ ಎಂದರು. ಮಾಜಿ ಮಂತ್ರಿ ಪ್ರಮೋದ್ ಮಧ್ವರಾಜ್ ಮಾತನಾಡಿ ಸುನೀಲ್ ಕುಮಾರ್ ಗೆದ್ದು ದಾಖಲೆ ಬರೆಯಲಿದ್ದು , ರಾಜ್ಯದ ಭೂಪಟದಲ್ಲಿ ಸೇರಿಕೊಳ್ಳುತ್ತಾರೆ , ಜಾತಿ ಎರಡೆರಡು ಇಲಾಖೆಗಳನ್ನು ನಿಭಾಯಿಸುತ್ತಾ ಒತ್ತಡಗಳಲ್ಲಿದ್ದಾಗಲು ಜನರ ಮನ್ನಣೆ ಗಳಿಸಿದವರು ಎಂದರು.
ಬಿಜೆಪಿ ಹಿರಿಯ ಮುಖಂಡ ಎಂಕೆ ವಿಜಯಕುಮಾರ್ , , ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ,ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿದರು ಸಭೆಯಲ್ಲಿ ಮುಂಬಯಿ ಉದ್ಯಮಿ ರತ್ನಾಕರ್ ಶೆಟ್ಟಿ , ಕರುಣಾಕರ್ ಶೆಟ್ಟಿ , ಶಶಿಕಿರಣ್ ಶೆಟ್ಟಿ ಬರೋಡ , ಎರ್ಮಾಳು ಹರೀಶ್ ಶೆಟ್ಟಿ, ಪುರಂದರ , ಪೂನಾ ವಿಶ್ವನಾಥ ಪೂಜಾರಿ , ಪ್ರಸಾದ್ ಶೆಟ್ಟಿ , ಬಾಲಕೃಷ್ಣ ಶೆಟ್ಟಿ , ಬೆಳ್ವಾಯಿ ಸದಾನಂದ ಶೆಟ್ಟಿ , ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಿಜೆಪಿ ಹಿರಿಯ ಮುಖಂಡರಾದ ಎಂಕೆ ವಿಜಯಕುಮಾರ್ , ಬೋಳ ಪ್ರಭಾಕರ್ ಕಾಮತ್ , ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ, , ಕ್ಯಾಪ್ಟನ್ ಗಣೇಶ್ ಕಾರ್ಣಿಕ್ , ಕಾರ್ಕಳ ಚುನಾವಣಾ ಪ್ರಭಾರಿ ಬಾಹುಬಲಿ ಪ್ರಸಾದ್ , ಭಾಸ್ಕರ್ ಕೋಟ್ಯಾನ್, ಜಿಲ್ಲಾದ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ , ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಮಹೇಶ್ ಕುಡುಪುಲಾಜೆ , ರವೀಂದ್ರ ಶೆಟ್ಟಿ ಬಜಗೋಳಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ , ಕುಕ್ಕುಂದೂರು ರವೀಂದ್ರ ಶೆಟ್ಟಿ ಸ್ವಾಗತಿಸಿದರು. ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಸಾಣೂರು ಕರಣಾಕರ್ ಕೋಟ್ಯಾನ್ ಧನ್ಯವಾದ ವಿತ್ತರು.ಕಾರ್ಕಳ ಸ್ವರಾಜ್ಯ ಮೈದಾನದಿಂದ ಹೊರಟ ಬಿಜೆಪಿ ಬಿಜೆಪಿ ಪಕ್ಷದ ಅಭ್ಯರ್ಥಿ ಸುನೀಲ್ ಕುಮಾರ್ ಪಾದಯಾತ್ರೆ ಅನಂತಶಯನ ಮಾರ್ಗವಾಗಿ ಬಸ್ ನಿಲ್ದಾಣ , ಮೂರುಮಾರ್ಗ , ಸಾಲ್ಮರ , ಬಂಡಿಮಠ, ಮೂಲಕ ಕಾರ್ಕಳ ತಾಲೂಕು ಮಿನಿ . ಬಳಿಯಿಂದ ಸಾಗಿ ಕುಕ್ಕೂಂದೂರು ಪಂಚಾಯತ್ ಬಳಿಯಿರುವ ಮೈದಾನದತ್ತ ಸಾಗಿ ಬಂದಿತು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.