



ಕಾರ್ಕಳ : ಆಸ್ತಿ ಹರಾಜು ನೋಟಿಸ್ ಹಚ್ಚಲು ಹೋದ ಗ್ರಾಮಕರಣಿಕರಿಗೆ ಬೆದರಿಕೆ ಹಾಕಿದ ಘಟನೆ ಕಾರ್ಕಳ ತಾಲೂಕಿನ ಪಳ್ಳಿಯಲ್ಲಿ ನಡೆದಿದೆ . ಗ್ರಾಮಕರಣಿಕ ಶ್ರೀನಿವಾಸ್ ರವರು ಪಳ್ಳಿ ಗ್ರಾ.ಪಂ ವ್ಯಾಪ್ತಿಯ ಸತೀಶ್ ಸಾಲ್ಯನ್ ಎಂಬುವವರಿಗೆ MAG TAX CR.58/2021.22 ಜಪ್ತಿಯಾದ ಹರಾಜು ಬಗೆಗಿನ ನೋಟೀಸನ್ನು ಜಾರಿಗೊಳಿಸುವ ಬಗ್ಗೆ ಗ್ರಾಮ ಸಹಾಯಕರು ಹೋದಾಗ ನೋಟೀಸನ್ನು ತಿರಸ್ಕರಿಸಿದ್ದಲ್ಲದೇ ಗ್ರಾಮ ಕರಣಿಕರು ಹರಾಜು ಮಾಡುವ ಸ್ವತ್ತಿನ ಮೇಲೆ ಪ್ರಚುರಪಡಿಸಿ ನೋಟೀಸನ್ನು ಹರಿದು ಬಿಸಾಡಿದ್ದು ಹಾಗು ಅದೇ ದಿನ ಸಂಜೆ ದೂರವಾಣಿ ಕರೆಮಾಡಿ ಜೀವಬೆದರಿಕೆ ಮಾಡಿ ‘ನೋಟೀಸನ್ನು ನನ್ನ ಆಸ್ತಿಯ ಮೇಲೆ ಅಂಟಿಸಲು ನೀವು ಯಾರು ನಿಮಗೆ ಯಾರು ಅಧಿಕಾರ ಕೊಟ್ಟದ್ದು ಎಂದು ಬೆದರಿಕೆ ಹಾಕಿದ್ದರು.
ಅಲ್ಲದೆ ಡಿ.೧೩ರಂದು ಗ್ರಾಮ ಕರಣಿಕ ಶ್ರೀನಿವಾಸ ಅವರು ಕಛೇರಿಯಲ್ಲಿ ಪಿಂಚಣಿದಾರರ ಭೌತಿಕ ಪರಿಶೀಲನೆ ಕರ್ತವ್ಯ ಮಾಡುತ್ತಿದ್ದಾಗ ಸತೀಶ್ ಸಾಲಿಯಾನ್ ಹಾಗೂ ಇನ್ನೊಬ್ಬ ಅಪರಿಚಿತ ವ್ಯಕ್ತಿ ಕಛೇರಿಗೆ ಬಂದು ಏಕವಚನದಲ್ಲಿ ಅವಾಚ್ಯವಾಗಿ ನಿಂದಿಸಿ ನೀನು ಯಾರು ನಿನ್ನನ್ನು ನೋಡಿಕೊಳ್ಳುತ್ತೇನೆ ನಿನ್ನಂತವರನ್ನು ತುಂಬಾ ನೋಡಿದ್ದೇನೆ ದಾಳಿಗೆ ಮುಂದಾಗಿ , ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.